Publish Date: Mon, 25 Nov 2019 (12:02 IST)
Updated Date: Mon, 25 Nov 2019 (12:05 IST)
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ತಮ್ಮ ಸಂಬಂಧಿಯನ್ನು ಕಣಕ್ಕಿಳಿಸಿದ ಹಿನ್ನಲೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣದಿಂದ ಹೆಚ್.ಡಿಕೆ ಇನ್ನೂ ಪಾಠ ಕಲಿತಿಲ್ಲ. ತುಮಕೂರು, ಮಂಡ್ಯದಲ್ಲಿ ಸೋತ್ರೂ ಹೆಚ್.ಡಿಕೆಗೆ ಬುದ್ಧಿ ಬಂದಿಲ್ಲ ಎಂದು ಹೆಚ್.ಡಿಕೆ ವಿರುದ್ಧ ಕಿಡಿಕಾರಿದ್ದಾರೆ.
ಅಲ್ಲದೇ ರಾಜಕಾರಣದಲ್ಲಿ ತಮ್ಮ ಕುಟುಂಬದವರು ಮಾತ್ರ ಇರಬೇಕು. ಹೀಗಾಗಿ ಚಿಕ್ಕಬಳ್ಳಾಪುರದಲ್ಲಿ ತಮ್ಮ ಸಂಬಂಧಿ ಕಣಕ್ಕಿಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.