Select Your Language

Notifications

webdunia
webdunia
webdunia
webdunia

ಧರ್ಮಸ್ಥಳ ಕೇಸ್ ಗೆ ಮಹತ್ವದ ತಿರುವು: ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಸಾಧ್ಯತೆ

Mahesh Shetty Timarodi

Krishnaveni K

ಮಂಗಳೂರು , ಸೋಮವಾರ, 18 ಆಗಸ್ಟ್ 2025 (14:02 IST)
Photo Credit: Facebook
ಮಂಗಳೂರು: ಧರ್ಮಸ್ಥಳ ಹತ್ಯೆಗೆ ಮಹತ್ವದ ತಿರುವು ಸಿಕ್ಕಿದೆ. ಇದೀಗ ಸಿಎಂ ವಿರುದ್ಧ ಹೇಳಿಕೆ ನೀಡಿದ್ದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಸಾಧ್ಯತೆ ದಟ್ಟವಾಗಿದೆ.

ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುವ ಭರದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಸಿಎಂ ವಿರುದ್ಧ ಕೊಲೆ ಆರೋಪ ಮಾಡಿದ್ದರು. ಅವರ ಹೇಳಿಕೆಯನ್ನು ಬಿಜೆಪಿ ನಾಯಕರು ಇಂದು ಸದನದಲ್ಲಿ ಪ್ರಸ್ತಾಪಿಸಿ ಗೃಹ ಸಚಿವರಿಂದ ಪ್ರತಿಕ್ರಿಯೆ ಕೇಳಿದ್ದಾರೆ.

ಸಿಎಂ 28 ಕೊಲೆ ಮಾಡಿದ್ದಾರೆ ಎಂದು ಮಹೇಶ್ ಶೆಟ್ಟಿ ತಿಮರೋಡಿಯವರು ಹೇಳಿದ್ದಾರೆ. ಅವರ ವಿರುದ್ಧ ದೇಶದ ನಂ1 ಗೃಹಸಚಿವರು ಏನು ಕ್ರಮ ಕೈಗೊಳ್ತೀರಿ ಎಂದು ಬಿಜೆಪಿ ನಾಯಕರು ಟಾಂಗ್ ಕೊಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗೃಹಸಚಿವ ಡಾ ಜಿ ಪರಮೇಶ್ವರ್ ನಮ್ಮನ್ನು ಅಷ್ಟು ಅಸಹಾಯಕರು ಎಂದುಕೊಳ್ಳಬೇಡಿ. ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡ್ತೀವಿ ಎಂದಿದ್ದಾರೆ. ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಪರಮೇಶ್ವರ್ ಹೇಳಿದ್ದಾರೆ. ಆ ವ್ಯಕ್ತಿಯನ್ನು ದೊಡ್ಡದು ಮಾಡೋದು ಬೇಡ. ಅವರ ಮೇಲೆ ಹತ್ತಾರು ಕೇಸ್ ಗಳಿವೆ. ಈಗ ಏನು ಕಾನೂನು ರೀತಿ ಮಾಡಬಹುದೋ ಮಾಡ್ತೀವಿ ಎಂದಿದ್ದಾರೆ. ಹೀಗಾಗಿ ಈಗ ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಸಾಧ್ಯತೆಯಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ಗೊಂದಲಕ್ಕೆ ಇಂದೇ ತೆರೆ: ವಿಜಯೇಂದ್ರ ವಿಶ್ವಾಸ