Select Your Language

Notifications

webdunia
webdunia
webdunia
webdunia

ಹಾಲಿ ಸಚಿವರ ಕ್ಷೇತ್ರದಲ್ಲಿ ಮೊದಲ ಬಾರಿಗೆ ತ್ರಿಕೋನ ಪೈಪೋಟಿ

ಹಾಲಿ ಸಚಿವರ ಕ್ಷೇತ್ರದಲ್ಲಿ ಮೊದಲ ಬಾರಿಗೆ ತ್ರಿಕೋನ ಪೈಪೋಟಿ
ತುಮಕೂರು , ಮಂಗಳವಾರ, 25 ಏಪ್ರಿಲ್ 2023 (17:17 IST)
ತುಮಕೂರು : ಚಿಕ್ಕನಾಯಕನಹಳ್ಳಿ ಹಾಲಿ ಸಚಿವರೊಬ್ಬರು ಪ್ರತಿನಿಧಿಸುತ್ತಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಇಲ್ಲಿವರೆಗೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮಾತ್ರ ಫೈಟ್ ನಡೆಯುತ್ತಿತ್ತು. ಆದರೆ ಈ ಚುನಾವಣೆಯಲ್ಲಿ (2023ರ ವಿಧಾನಸಭಾ ಚುನಾವಣೆ) ಇದೇ ಮೊದಲ ಬಾರಿಗೆ ತ್ರಿಕೋನ ಪೈಪೋಟಿ ಏರ್ಪಟ್ಟಿದೆ.

ಬಿಜೆಪಿ ಸರ್ಕಾರದ ಕಾನೂನು ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಕಿರಣ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. 

ಹೇಗಿದೆ ಚುನಾವಣಾ ರಾಜಕೀಯ ಲೆಕ್ಕಾಚಾರ?

ಜೆಡಿಎಸ್ನ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಕಿರಣ್ ಕುಮಾರ್ ಇಬ್ಬರಿಗೂ ಕ್ಷೇತ್ರದಲ್ಲಿ ಅನುಕಂಪದ ಅಲೆ ಇದೆ.

ಅದೇ ರೀತಿ ಸಚಿವರಾಗಿ ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸ ಮಾಡಿರುವುದರಿಂದ ಮಾಧುಸ್ವಾಮಿ ಅವರ ಮೇಲೂ ಜನರ ಒಲವಿದೆ. ಲಿಂಗಾಯತ ಸಮುದಾಯದ ಮತ ಸುಮಾರು 38 ಸಾವಿರ ಇದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಬ್ಬರೂ ಲಿಂಗಾಯತ ಸಮುದಾಯದವರಾಗಿರುವುದರಿಂದ ಇಬ್ಬರಿಗೂ ಮತ ಹಂಚಿಕೆ ಆಗಬಹುದು.

ಈ ಮತ ವಿಭಜನೆ ಜೆಡಿಎಸ್ ಅಭ್ಯರ್ಥಿ ಸುರೇಶ್ ಬಾಬುಗೆ ಅನುಕೂಲ ಆಗಲಿದೆ ಎಂಬ ಲೆಕ್ಕಾಚಾರ ಇದೆ. ಸುರೇಶ್ ಬಾಬು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಆ ಸಮುದಾಯದಿಂದಲೂ ಸುಮಾರು 35 ಸಾವಿರ ಮತಗಳಿವೆ. ಹಾಗಾಗಿ ಹೇಗೆ ಲೆಕ್ಕಾಚಾರ ಹಾಕಿದರೂ ಜೆಡಿಎಸ್ಗೆ ಲಾಭ ಆಗಬಹುದು ಎನ್ನಲಾಗಿದೆ.

ಜೊತೆಗೆ ಸಚಿವ ಮಾಧುಸ್ವಾಮಿ ವಿರುದ್ಧ ತೊಡೆತಟ್ಟಿ ಬಿಜೆಪಿಯಿಂದ ಬಂಡಾಯ ಎದ್ದು ಕಾಂಗ್ರೆಸ್ ಸೇರಿದ ಕಿರಣ್ ಕುಮಾರ್ ತಮ್ಮ ಗೆಲುವಿಗಿಂತ ಮಾಧುಸ್ವಾಮಿ ಸೋಲನ್ನು ಹೆಚ್ಚು ಬಯಸಿದ್ದಾರೆ. ಹಾಗಾಗಿ ಈ ಇಬ್ಬರ ನಡುವಿನ ಜಗಳ ಮಾಧುಸ್ವಾಮಿಗೆ ಮುಳುವಾಗಿ ಮೂರನೇ ವ್ಯಕ್ತಿ ಜೆಡಿಎಸ್ ಸುರೇಶ್ ಬಾಬುಗೆ ವರವಾಗಬಹುದು ಎಂಬ ವಿಶ್ಲೇಷಣೆಯೂ ನಡೆದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಪರ ಡಿಕೆ ಶಿವಕುಮಾರ್ ರೋಡ್ ಶೋ