Daily Horoscope

Select Your Language

Notifications

webdunia
webdunia
webdunia
webdunia

ಯಾವುದೇ ಅಹಂ ಇಲ್ಲ, ಬಿಜೆಪಿ ವಿರುದ್ಧ ಹೋರಾಡಲು ಸಿದ್ಧ: ಮಮತಾ ಬ್ಯಾನರ್ಜಿ

ಬಿಜೆಪಿ
ಪ್ರತಿಪಕ್ಷಗಳು ಒಟ್ಟಾಗಿವೆ ಎಂಬ ಸಂದೇಶವನ್ನು ದೇಶಕ್ಕೆ ತಿಳಿಸಬೇಕು. ಅದಾದ ಬಳಿಕ ನಾವು ಪ್ರಣಾಳಿಕೆ ಹಾಗೂ ಇತರ ವಿವರಗಳನ್ನು ನಿರ್ಧರಿಸುತ್ತೇವೆ. ನಾವು ದೇಶದ ಇತರ ಎಲ್ಲ ವಿರೋಧ ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಇಲ್ಲಿ ಯಾವುದೇ ಅಹಂಕಾರ ಹಾಗೂ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು.

ಈ ವೇಳೆ ನಿತೀಶ್ ಕುಮಾರ್ ಮಾತನಾಡಿ, ನಾನು ದೀದಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಕೋಲ್ಕತ್ತಾದ ಪ್ರಗತಿಯನ್ನು ಕಂಡು ಬೆರಗಾಗಿದ್ದೇನೆ. ರಾಜ್ಯ ಸರ್ಕಾರ ಬಂಗಾಳದಲ್ಲಿ ತಂದಿರುವ ಅಭಿವೃದ್ಧಿ ಶ್ಲಾಘನೀಯವಾಗಿದೆ. ನಾವು ದೀದಿಯೊಂದಿಗೆ ರಾಜಕೀಯ ಚರ್ಚೆ ನಡೆಸಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಬಿಜೆಪಿ ವಿರುದ್ಧ ಹೋರಾಡಲು ನಿರ್ಧರಿಸಿದ್ದೇವೆ ಎಂದರು. 

ನಾವು ಏನೇ ನಿರ್ಧಾರ ತೆಗೆದುಕೊಂಡರೂ ಅದು ನಮ್ಮ ದೇಶದ ಹಿತಕ್ಕಾಗಿ ಇರಬೇಕು. ಆದರೆ ಪ್ರಸ್ತುತ ನಮ್ಮ ದೇಶವನ್ನು ಆಳುತ್ತಿರುವ ಪಕ್ಷಕ್ಕೆ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ. ಅವರಿಗೆ ರಾಜಕೀಯದ ಬಗ್ಗೆ ಮಾತ್ರ ಕಾಳಜಿ ಇದೆ. ಈ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿಯು ಹಿನ್ನೆಡೆಯಾಗಿದೆ. ಕೋಲ್ಕತ್ತಾ ಹಾಗೂ ಬಿಹಾರ ಹೆಚ್ಚು ಅಭಿವೃದ್ಧಿಯಾಗಿದೆ. ಆದರೆ ಇದನ್ನೆಲ್ಲ ಮಾಡಿರುವುದು ಕೇಂದ್ರ ಸರ್ಕಾರವಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಫೀಲ್ಡಿಗಿಳಿದ ಮಾಜಿ ಪ್ರಧಾನಿ HDD