Publish Date: Mon, 24 Apr 2023 (19:50 IST)
Updated Date: Mon, 24 Apr 2023 (20:07 IST)
ಬೆಂಗಳೂರಿನ ಗಾಂಧಿನಗರ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಗುಲಿದೆ.. ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ರು. ಗಾಂಧಿನಗರ ಟಿಕೆಟ್ ಸಪ್ತಗಿರಿಗೌಡ ಪಾಲಾಗಿದ್ದು, ಕೃಷ್ಣಯ್ಯ ಶೆಟ್ಟಿ ಬಂಡಾಯವೆದ್ದು, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.. ಕೃಷ್ಣಯ್ಯ ಶೆಟ್ಟಿ ಮನವೊಲಿಸಲು ಬಿಜೆಪಿ ನಾಯಕರು ಇದುವರೆಗೂ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಅವರು ನಾಮಪತ್ರ ವಾಪಸ್ ಪಡೆಯದಿರಲು ನಿರ್ಧರಿಸಿದ್ದಾರೆ.. ಕೃಷ್ಣಯ್ಯ ಶೆಟ್ಟಿ 2008ರಲ್ಲಿ B.S. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಚಿವರಾಗಿದ್ದರು