Publish Date: Mon, 24 Apr 2023 (19:40 IST)
Updated Date: Mon, 24 Apr 2023 (19:59 IST)
ಬೆಂಗಳೂರಿನ ಚಿಕ್ಕಪೇಟೆ ಕಾಂಗ್ರೆಸ್ ಟಿಕೆಟ್ R.V.ದೇವರಾಜ್‌ಗೆ ನೀಡಲಾಗಿದ್ದು, ಟಿಕೆಟ್ ಆಕಾಂಕ್ಷಿ ಗಂಗಾಂಬಿಕೆ ಬಂಡಾಯ ಸಾರಿದ್ರು.. ಗಂಗಾಂಬಿಕೆ ಚಿಕ್ಕಪೇಟೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಸಿದ್ದಾರೆ.. ನಾಮಪತ್ರ ವಾಪಸ್ ಪಡೆಯುವಂತೆ ಗಂಗಾಂಬಿಕೆ ಮನವೊಲಿಸಲು ಕಾಂಗ್ರೆಸ್ ನಾಯಕರು ಯತ್ನ ನಡಸಿದ್ದು ಫಲನೀಡಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಗಂಗಾಂಬಿಕೆ ಮತ್ತು ಪತಿ ಮಲ್ಲಿಕಾರ್ಜುನ್ ಜೊತೆ ಚರ್ಚೆ ನಡೆಸಿ, ನಾಮಪತ್ರ ವಾಪಸ್ ಪಡೆಯುವಂತೆ ಮನವಿ ಮಾಡಿದ್ರು..ಇದೀಗ ನಾಮಪತ್ರ ವಾಪಸ್ ಪಡೆಯುವುದಾಗಿ ಗಂಗಾಂಬಿಕೆ ಪತಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.