Publish Date: Mon, 24 Apr 2023 (21:00 IST)
Updated Date: Mon, 24 Apr 2023 (20:28 IST)
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಆರೋಗ್ಯ ಸರಿಯಿರದಿದ್ದರೂ ಪ್ರಚಾರ ನಡೆಸಲು ಖುದ್ದು ಫಿಲ್ಡ್ಗೆ ಇಳಿಯಲಿದ್ದಾರೆ, ಕಲ್ಪತರು ನಾಡು ತುಮಕೂರಿಗೆ ಇಂದು H.D. ದೇವೇಗೌಡರು ಭೇಟಿ ನೀಡಿದ್ದಾರೆ. ಒಂದೇ ದಿನ ಮೂರು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಇನ್ನು ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿದ HDD, ನಾನು ಬೇರೆಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ, ಅವರಿಗೆ ಹೇಳುವ ಸ್ವಾತಂತ್ರ ಇದೆ ಹೇಳ್ತಾರೆ ಎಂದು ಹೇಳಿದ್ರು.. ವರುಣಾದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆಯೂ ಮಾತನಾಡಲ್ಲ, ಜನ ತೀರ್ಮಾನ ಮಾಡ್ತಾರೆ ಎಂದು ತಿಳಿಸಿದ್ರು