Publish Date: Sun, 21 Jan 2018 (11:11 IST)
Updated Date: Sun, 21 Jan 2018 (11:12 IST)
ಮಂಗಳೂರು: ರಸ್ತೆ ರಿಪೇರಿ ನಿಮಿತ್ತ ಶಿರಾಡಿ ಘಾಟ್ ಬಂದ್ ಮಾಡಿರುವುದರಿಂದ ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ವಾಹನ ಸವಾರರು ಪರದಾಡುವಂತಾಗಿದೆ.
ಶಿರಾಡ್ ಘಾಟಿ ಬದಲಾಗಿ ಚಾರ್ಮಾಡಿ ಘಾಟಿ ಮಾರ್ಗವಾಗಿ ಬದಲಿ ಮಾರ್ಗ ಸೂಚಿಸಲಾಗಿದೆ. ಆದರೆ ಇಲ್ಲಿ ಲಾರಿ ಸೇರಿದಂತೆ ಭಾರೀ ಪ್ರಮಾಣದ ವಾಹನಗಳನ್ನು ಬಿಟ್ಟಿರುವುದರಿಂದ ಕಿಲೋಮೀಟರ್ ಗಟ್ಟಲೆ ವಾಹನ ದಟ್ಟಣೆ ಉಂಟಾಗಿದ್ದು, ಸವಾರರಿಗೆ ಗಮ್ಯ ಸ್ಥಳಕ್ಕೆ ತಲುಪುವುದು ಕಷ್ಟವಾಗಿದೆ.
ನಿನ್ನೆಯಿಂದ ಆರು ತಿಂಗಳ ಕಾಲ ಶಿರಾಡಿ ಘಾಟಿ ಬಂದ್ ಮಾಡಲಾಗಿದ್ದು, ಮಂಗಳೂರಿಗೆ ತೆರಳಲು ಬದಲಿ ಮಾರ್ಗವನ್ನು ಕೊಟ್ಟಿಗೆ ಹಾರ, ಚಾರ್ಮಾಡಿ ಘಾಟಿ ಮೂಲಕ ನೀಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ