Publish Date: Fri, 19 Jan 2018 (15:26 IST)
Updated Date: Fri, 19 Jan 2018 (15:45 IST)
ಮೈಸೂರು: ವಿಜಯನಗರದ 2ನೇ ಬ್ಲಾಕ್ ರಸ್ತೆ ಬಳಿ 10ಕ್ಕೂ ಹೆಚ್ಚು ತಲೆ ಬುರುಡೆಗಳು ಪತ್ತೆಯಾಗಿದೆಯಂತೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆಯಂತೆ.
ಶುಕ್ರವಾರ ಮುಂಜಾನೆ ವಿಜಯನಗರ 2ನೇ ಹಂತದ ರಸ್ತೆಯ ಬಳಿ ಚೀಲದಲ್ಲಿ ತುಂಬಿಸಿ ತಂದು ಹಾಕಿದ್ದ ತಲೆಬುರುಡೆಗಳು ಪತ್ತೆಯಾಗಿರುವುದಾಗಿ ಮಾಧ್ಯಮದ ವರದಿಯಿಂದ ತಿಳಿದು ಬಂದಿದೆ.
ಇದರಲ್ಲಿರುವ 12 ತಲೆಬುರುಡೆಗಳ ಪೈಕಿ ಮಕ್ಕಳ ತಲೆಬುರುಡೆಯೂ ಪತ್ತೆಯಾಗಿದೆಯಂತೆ. ಮಾಟ ಮಂತ್ರಕ್ಕಾಗಿ ತಲೆ ಬುರುಡೆಯನ್ನು ತಂದಿರಬಹುದು ಎಂಬುದು ಸ್ಥಳೀಯರ ಶಂಕೆಯಾಗಿದೆ. ಆದರೆ ಇದನ್ನು ಯಾರು, ಎಲ್ಲಿಂದ ತಂದು ಇಲ್ಲಿ ಹಾಕಿದ್ದಾರೆ ಎಂಬ ವಿವರಗಳ ಕುರಿತು ಸರಿಯಾದ ಮಾಹಿತಿ ಇಲ್ಲ. ಬೆಳಿಗ್ಗೆ ಪೌರ ಕಾರ್ಮಿಕರು ಕಸ ಎತ್ತಲು ಬಂದಾಗ ಈ ಪ್ರಕರಣ ತಿಳಿದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ