Select Your Language

Notifications

webdunia
webdunia
webdunia
webdunia

ಅಂಗವಿಕಲೆ ಮೇಲೆ ಟ್ರಾಫಿಕ್ ಎಸ್ ಐ ದರ್ಪ

ಅಂಗವಿಕಲೆ ಮೇಲೆ ಟ್ರಾಫಿಕ್ ಎಸ್ ಐ ದರ್ಪ
bangalore , ಭಾನುವಾರ, 30 ಜನವರಿ 2022 (20:00 IST)
ಬೆಂಗಳೂರು : ವಿಕಲಚೇತನ ಮಹಿಳೆಯೋರ್ವರಿಗೆ ಎಎಸ್‌ಐ ಒಬ್ಬರು ನಡು ರಸ್ತೆಯಲ್ಲಿ ಬೂಟು ಕಾಲಲ್ಲಿ ಒದ್ದು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ . ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಘಟನೆಯ ವಿಡಿಯೋ ಇದಾಗಿದೆ . ಹಲಸೂರು ಗೇಟ್ ಸಂಚಾರ ಠಾಣೆ ವ್ಯಾಪ್ತಿಯ ಟೋಯಿಂಗ್ ವಾಹನದ ಸಿಬ್ಬಂದಿ ಮೇಲೆ ಮಹಿಳೆ ಕಲ್ಲು ಬೀಸಿದ್ದಾಳೆ . ಅದು ಎಎಸ್‌ಐ ಮುಖಕ್ಕೆ ತಾಗಿದ್ದು , ರಕ್ತ ಹರಿದಿದೆ . ಸಿಟ್ಟಿನಿಂದ ಟೋಯಿಂಗ್ ವಾಹನದಿಂದ ಕೆಳಗೆ ಇಳಿದು ಬಂದ ಎಎಸ್‌ಐ , ಅವಾಚ್ಯ ಶಬ್ದಗಳಿಂದ ನಿಂದಿಸಿ , ಬೂಟು ಕಾಲಿನಲ್ಲಿ ಒದ್ದಿದ್ದಾರೆ . ವೈರಲ್ ವಿಡಿಯೋ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವ ಎಎಸ್ಐ , ವಿಕಲಚೇತನ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ . ಬಳಿಕ ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ಮಹಿಳೆ ವಿರುದ್ಧ ದೂರು ನೀಡಿದ್ದಾರೆ . ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಆರೋಪದಡಿ ಮಹಿಳೆಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ . ಕ್ಷಮಿಸಿ ಎಂದು ಕಿವಿಗೊಡದ ಪೊಲೀಸರು : ವಿಕಲಚೇತನ ಆಗಿರುವುದರಿಂದ ಕ್ಷಮಿಸಿ ಬಿಡಿ ಎಂದು ಸಾರ್ವಜನಿಕರು ಪೊಲೀಸರನ್ನು ಕೇಳಿಕೊಂಡರೂ ಸಹ ಆಕೆಯನ್ನು ಬಿಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ . ಮಹಿಳೆಗೆ ಟೋಯಿಂಗ್ ವಾಹನ ಕಂಡರೆ ಸಿಟ್ಟು : ಮಹಿಳೆಗೆ ಟೋಯಿಂಗ್ ವಾಹನ ಕಂಡರೆ ಅಗಲ್ಲ . ಹೀಗಾಗಿ , ಟೋಯಿಂಗ್ ಮಾಡದಂತೆ ಪ್ರತಿ ನಿತ್ಯವೂ ಟೋಯಿಂಗ್ ವಾಹನದ ಮೇಲೆ ಕಲ್ಲು ಎಸೆಯುತ್ತಿದ್ದಳು . ಆದ್ರೆ ಆಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ . ಮೂರು ದಿನದ ಹಿಂದೆ ಆಕೆ ತೂರಿದ ಕಲ್ಲು ಎಎಸ್‌ಐ ಮುಖಕ್ಕೆ ಬಿದ್ದಿದೆ . ಆ ಸಿಟ್ಟಿನಲ್ಲಿ ಎಎಸ್‌ಐ ಬೂಟು ಕಾಲಿನಲ್ಲಿ ಒದ್ದು , ಆ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ .

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು, ಕೋಲಾರ ಸುತ್ತಮುತ್ತ ಇನ್ನೆರಡು ದಿನ ಮಳೆ; ನೆರೆಯ ರಾಜ್ಯಗಳಲ್ಲೂ ವರುಣನ ಅಬ್ಬರ