Select Your Language

Notifications

webdunia
webdunia
webdunia
webdunia

ಯುವತಿಯರನ್ನು ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ

ಯುವತಿಯರನ್ನು ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ
bangalore , ಗುರುವಾರ, 16 ಡಿಸೆಂಬರ್ 2021 (22:23 IST)
ನೆರೆಯ ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳದಿಂದ ಮಾನವ ಕಳ್ಳ ಸಾಗಾಣೆ ಮೂಲಕ ಯುವತಿಯರನ್ನು ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯೊಬ್ಬಳನ್ನು ಕೋಡಿಗೆಹಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. 
ಮಹಾರಾಷ್ಟ್ರ ಮೂಲದ ಜ್ಯೋತಿ (47) ಬಂಧಿತೆ. ಆರೋಪಿಯಿಂದ ಇಬ್ಬರು ಸಂತ್ರಸ್ತ ಯುವತಿಯರನ್ನು ರಕ್ಷಿಸಲಾಗಿದೆ ಎಂದು ಪೆÇಲೀಸರು ತಿಳಿಸಿದರು. 
ಆರೋಪಿ ಜ್ಯೋತಿಯು, ಬಾಂಗ್ಲಾ ಹಾಗೂ ಪಶ್ಚಿಮ ಬಂಗಾಳ ಮೂಲದ ಯುವತಿಯರನ್ನು ಅಕ್ರಮವಾಗಿ ರವಾನೆ ಮಾಡಿಕೊಂಡು, ನಗರದ ನಾನಾ ಕಡೆಗಳಲ್ಲಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದಳು. ಈಗಾಗಲೇ ತನ್ನ ಸಂಪರ್ಕಿಸಿ ವೇಶ್ಯಯರ ಜತೆ ಸಂಬಂಧ ಹೊಂದಿದ್ದ ಪರಿಚಯಸ್ಥ ಯುವಕರ ಮೂಲಕ ಗ್ರಾಹಕರನ್ನು ಹುಡುಕುತ್ತಿದ್ದಳು. ಅವರಿಗೆ ಯುವತಿಯರನ್ನು  ಕಳುಹಿಸಿ ಹಣ ಗಳಿಸುತ್ತಿದ್ದಳು ಎಂದು ತಿಳಿದುಬಂದಿದೆ. 
ಇದೇ ರೀತಿ ಅಕ್ರಮವಾಗಿ ಕರೆತಂದಿದ್ದ ಯುವತಿಯನ್ನು ಭದ್ರಪ್ಪ ಲೇಔಟ್‍ನ ಲಾಡ್ಜ್‍ವೊಂದರಲ್ಲಿ  ಕೂಡಿ ಹಾಕಿ ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಈ ಬಗ್ಗೆ ಎನ್‍ಜಿಒ ಸಂಸ್ಥೆಯೊಂದು ಕೋಡಿಗೆಹಳ್ಳಿ ಠಾಣೆ ಪೆÇಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧಾರಿಸಿ ಪೆÇಲೀಸರು ಲಾಡ್ಜ್ ಮೇಲೆ ದಾಳಿ ನಡೆಸಿ ಜ್ಯೋತಿಯನ್ನು ಬಂಧಿಸಿ, ಇಬ್ಬರು ಸಂತ್ರಸ್ತ ಯುವತಿಯರನ್ನು ರಕ್ಷಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಜತೆ ನೇರ ಸಂಪರ್ಕ-ಪ್ರೆಸ್ಟಿಜ್ ಗ್ರೂಪ್‍ಗೆನ ಅಂಜುಂ ರಜಾಕ್