Select Your Language

Notifications

webdunia
webdunia
webdunia
webdunia

ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಗಂಡನ ಮರ್ಮಾಂಗ ಕತ್ತರಿಸಿದ ಹೆಂಡತಿ!

ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಗಂಡನ ಮರ್ಮಾಂಗ ಕತ್ತರಿಸಿದ ಹೆಂಡತಿ!
bangalore , ಬುಧವಾರ, 15 ಡಿಸೆಂಬರ್ 2021 (13:11 IST)
ಪ್ರತಿ ರಾತ್ರಿಯೂ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಗಂಡನ ಕಾಟ ತಾಳಲಾರದೆ ಕೋಪದಿಂದ ಹೆಂಡತಿ ತನ್ನ ಗಂಡನ ಮರ್ಮಾಂಗವನ್ನೇ ಕತ್ತರಿಸಿರುವ ವಿಚಿತ್ರ ಮತ್ತು ಆಘಾತಕಾರಿ ಘಟನೆ ಮಧ್ಯಪ್ರದೇಶದ ಟಿಕಮ್‌ಗಢದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಂಡ ದಿನವೂ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರಿಂದ ಆತನ ಹೆಂಡತಿ ಕಳೆದ ವಾರ ತನ್ನ 26 ವರ್ಷದ ಪತಿಯ ಜನನಾಂಗವನ್ನು ಕತ್ತರಿಸಿ ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಜಾತಾರಾ ಪೊಲೀಸ್ ಠಾಣೆಯ ಉಸ್ತುವಾರಿ ತ್ರಿವೇಂದ್ರ ತ್ರಿವೇದಿ ನೀಡಿರುವ ಮಾಹಿತಿ ಪ್ರಕಾರ, ಒಬ್ಬ ವ್ಯಕ್ತಿ ಭಾನುವಾರ ಪೊಲೀಸ್ ಠಾಣೆಗೆ ಫೋನ್ ಮಾಡಿ ತನ್ನ ಹೆಂಡತಿ ತನ್ನ ಗುಪ್ತಾಂಗವನ್ನು ಕಟ್ ಮಾಡಿದ್ದಾಳೆ ಎಂದು ದೂರು ನೀಡಿದ್ದ. ನಾನು ನನ್ನ 24 ವರ್ಷದ ಹೆಂಡತಿ ಜೊತೆ ಲೈಂಗಿಕ ಕ್ರಿಯೆ ನಡೆಸಲು ಪ್ರಯತ್ನಿಸಿದಾಗ ಆಕೆ ನಿರಾಕರಿಸಿದಳು. ಬಲವಂತವಾಗಿ ಆಕೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಲು ಯತ್ನಿಸಿದ್ದರಿಂದ ನನ್ನ ಹೆಂಡತಿ ನನ್ನ ಮರ್ಮಾಂಗವನ್ನು ಕತ್ತರಿಸಿದ್ದಾಳೆ ಎಂದು ದೂರಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.ಡಿಸೆಂಬರ್ 7ರಂದು ಮಧ್ಯಪ್ರದೇಶದ ರಾಮನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅವರಿಬ್ಬರೂ 2019ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಕೆಲವೇ ದಿನಕ್ಕೆ ಜಗಳ ಮಾಡಿಕೊಂಡಿದ್ದ ಅವರು ಕೆಲವೇ ದಿನಗಳಲ್ಲಿ ರಾಜಿ ಮಾಡಿಕೊಂಡಿದ್ದರು. ಆದರೂ ದಿನವೂ ಅವರಿಬ್ಬರ ನಡುವೆ ಜಗಳವಾಗುತ್ತಿತ್ತು. ಈ ತಿಂಗಳ ಮೊದಲ ವಾರದಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಗಂಡನ ಮೇಲಿನ ಕೋಪದಿಂದ ಆಕೆ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ.
 
ಆಕೆಯ ಗಂಡನಿಗೆ ಆಪರೇಷನ್​ ಮಾಡಲಾಗಿದ್ದು, ಇದೇ ಕಾರಣಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಆತ ತಡವಾಗಿ ಪೊಲೀಸರಿಗೆ ದೂರು ನೀಡಿದ್ದ. ಹರಿತವಾದ ವಸ್ತುವಿನಿಂದ ಆತನ ಗುಪ್ತಾಂಗವನ್ನು ಕತ್ತರಿಸಲಾಗಿದ್ದು, ವೈದ್ಯರು ಹೊಲಿಗೆ ಹಾಕಿದ್ದಾರೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ಆ ವ್ಯಕ್ತಿಯ ಹೆಂಡತಿಯನ್ನು ವಿಚಾರಣೆ ನಡೆಸಲು ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿ ಆತ್ಮಹತ್ಯೆ ಯತ್ನ, ಸಾಕ್ಷ್ಯ ನೀಡುವಂತೆ ನೋಟಿಸ್ ಜಾರಿ