Select Your Language

Notifications

webdunia
webdunia
webdunia
webdunia

ಮಗನ ಹುಟ್ಟುಹಬ್ಬ ಆಚರಿಸುವಾಗ ಆಕಸ್ಮಿಕವಾಗಿ ಗುಂಡು ಹಾರಿ ತಾಯಿ ಸಾವು

webdunia
bangalore , ಶನಿವಾರ, 25 ಡಿಸೆಂಬರ್ 2021 (20:02 IST)
ಹುಟ್ಟುಹಬ್ಬದಲ್ಲಿ ಅನಿತಾಳ ಸಂಬಂಧಿಕರು ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ ಏಕಾಏಕಿ ಪಿಸ್ತೂಲಿನಿಂದ ಸಿಡಿದ ಗುಂಡು ಅನಿತಾರಿಗೆ ತಾಗಿದೆ.ತನ್ನ ಮಗನ ಹುಟ್ಟುಹಬ್ಬ ಆಚರಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ತಾಯಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶ ಲಖೀಂಪುರ್​ಖೇರಿಯಲ್ಲಿ ನಡೆದಿದೆ. ಅನಿತಾ ವರ್ಮಾ ಮತ್ತು ಪ್ರದೀಪ್ ವರ್ಮಾ ಅವರ ಮಗನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಮನೆಯಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಅಲ್ಲಿ 100ಕ್ಕೂ ಹೆಚ್ಚು ಸ್ನೇಹಿತರು, ಸಂಬಂಧಿಕರು ಸೇರಿದ್ದರು.
 
ಹುಟ್ಟುಹಬ್ಬದಲ್ಲಿ ಅನಿತಾಳ ಸಂಬಂಧಿಕರು ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ ಏಕಾಏಕಿ ಪಿಸ್ತೂಲಿನಿಂದ ಸಿಡಿದ ಗುಂಡು ಅನಿತಾರಿಗೆ ತಾಗಿದೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈರಾಮ್ ವರ್ಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಮಗುವಿನ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತಾಯಿ ಸಾವನ್ನಪ್ಪಿದ್ದಾರೆ. ಮಂಗಳವಾರ ಚಕ್ದನ್ ಮಜ್ರಾ ಸರ್ಖಾನ್‌ಪುರ ಗ್ರಾಮದ ನಿವಾಸಿ ಪ್ರದೀಪ್ ವರ್ಮಾ ಅವರ ಮಗುವಿನ ಹುಟ್ಟುಹಬ್ಬದ ಕಾರ್ಯಕ್ರಮವಿತ್ತು. ಕಾರ್ಯಕ್ರಮದಲ್ಲಿ ಅನೇಕ ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು. ಪ್ರದೀಪ್ ವರ್ಮಾ ಅವರ ಸೋದರ ಸಂಬಂಧಿ ಫರ್ಧಾನ್ ಪೊಲೀಸ್ ಠಾಣೆಯ ಸರಾಯ್ ದೇವಕಾಲಿ ನಿವಾಸಿ ಜೈರಾಮ್ ಕೂಡ ಭಾಗಿಯಾಗಿದ್ದರು. ಜೈರಾಮ್ ವಿಪರೀತ ಕುಡಿದು ಕೈಯಲ್ಲಿ ರಿವಾಲ್ವರ್ ಹಿಡಿದಿದ್ದ.
 
ಜೈರಾಮ್ ಕುಡಿದ ಮತ್ತಿನಲ್ಲಿ ರೂಮಿನಲ್ಲಿ ಮಲಗಿದ್ದ. ಇದೇ ವೇಳೆ ರಾತ್ರಿ 8.30ರ ಸುಮಾರಿಗೆ ಪ್ರದೀಪ್ ವರ್ಮಾ ಹಾಗೂ ಅವರ ಸೋದರ ಮಾವ ಜೈರಾಮ್ ಅವರನ್ನು ಊಟಕ್ಕೆ ಕರೆಯಲು ತೆರಳಿದ್ದರು. ಆರೋಪಿ ಜೈರಾಮ್ ಮದ್ಯದ ಅಮಲಿನಲ್ಲಿ ಪರವಾನಗಿ ಪಡೆದ ರಿವಾಲ್ವರ್ ಹಿಡಿದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದಾಗ ಆ ಗುಂಡು ಪ್ರದೀಪ್ ವರ್ಮಾ ಅವರ ಪತ್ನಿ ಅನಿತಾ ವರ್ಮಾ ಅವರ ಎದೆಗೆ ತಗುಲಿದೆ. ಗಾಯಗೊಂಡಿದ್ದ ಅನಿತಾಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅನಿತಾ ಮೃತಪಟ್ಟಿದ್ದಾರೆ.
 ಅನಿತಾ ವರ್ಮಾ ಅವರ ಪತಿ ಪ್ರದೀಪ್ ವರ್ಮಾ ನೀಡಿದ ದೂರಿನ ಮೇರೆಗೆ, ಸರಾಯ್ ದೇವಕಲಿ ನಿವಾಸಿ ಜೈರಾಮ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಜೈರಾಮ್ ಅವರ ಪರವಾನಗಿ ಪಡೆದ ರಿವಾಲ್ವರ್‌ನಿಂದ ಗುಂಡು ತಗುಲಿ ವಿವಾಹಿತ ಮಹಿಳೆ ಅನಿತಾ ಸಾವನ್ನಪ್ಪಿದ್ದಾರೆ ಎಂದು ಖೇರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಾಂಧಾ ಸಿಂಗ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಲ್​ಫ್ರೆಂಡ್ ಜೊತೆ ಗುಟ್ಟಾಗಿ ಮದುವೆಯಾಗಿದ್ದಕ್ಕೆ ಯುವಕನ ಗುಪ್ತಾಂಗವೇ ಕಟ್!