ನಗರದ ವಾಹನ ಸವಾರರನ್ನು ಕನಸಲ್ಲೂ ಕಾಡುತ್ತಿದ್ದ ಸಂಚಾರ ಪೊಲೀಸರ ಟೋಯಿಂಗ್ ಮತ್ತಷ್ಟು ಕಾಲ ಸ್ಥಗಿತಗೊಳ್ಳಲಿದೆ.
'ಸದ್ಯದ ಪರಿಸ್ಥಿತಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಟೋಯಿಂಗ್ ಮರು ಅರಂಭಿಸುವ ಬಗ್ಗೆ ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ' ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಅರ್.ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.
ದಿವ್ಯಾಂಗ ಮಹಿಳೆಗೆ ಹಲಸೂರು ಗೇಟ್ ಸಂಚಾರ ಠಾಣೆ ಎಎಸ್‌ಐ ನಾರಾಯಣ್ ಬೂಟು ಕಾಲಿನಲ್ಲಿ ಒದ್ದ ಪ್ರಕರಣ ಬೆಳಕಿಗೆ ಬಂದ ಬಳಿಕ ರಾಜಧಾನಿಯಲ್ಲಿ ಟೋಯಿಂಗ್ ಸ್ಥಗಿತಗೊಂಡಿತ್ತು. ಬೆಂಗಳೂರಿನ ರಸ್ತೆಗಳಿಗೆ ಇಳಿಯುತ್ತಿದ್ದ 110 ಕ್ಕೂ ಅಧಿಕ ಟೋಯಿಂಗ್ ವಾಹನಗಳು ಸ್ಥಗಿತಗೊಂಡಿದ್ದವು. ಟೋಯಿಂಗ್ ಕೆಲಸ ನಂಬಿಕೊಂಡಿದ್ದ ಸುಮಾರು ನಾಲ್ಕು ನೂರು ಕೆಲಸಗಾರರು ಇದೀಗ ಇತರೆ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಟೋಯಿಂಗ್ ವಾಹನ ಕಾರ್ಯಚರಣೆ ಸಂಪೂರ್ಣ ಸ್ಥಗಿತಗೊಂಡಿದೆ.