Select Your Language

Notifications

webdunia
webdunia
webdunia
webdunia

ಡಬಲ್ ರತಿಸುಖಕ್ಕೆ ಇಲ್ಲಿ ಟಚ್ ಮಾಡಿ...

ಡಬಲ್ ರತಿಸುಖಕ್ಕೆ ಇಲ್ಲಿ ಟಚ್ ಮಾಡಿ...
ಬೆಂಗಳೂರು , ಶುಕ್ರವಾರ, 22 ಮಾರ್ಚ್ 2019 (19:42 IST)
ರತಿಸುಖ ಎನ್ನುವುದು ಹೆಣ್ಣು-ಗಂಡಿನಲ್ಲಿ ಅಡಗಿರುವ ಸುಪ್ತವಾದ ಭಾವನೆ. ಅದು ಕೆರಳಿದಾಗ ಹಾಗೂ ಕೆರಳುವಂತೆ ಮಾಡಲು ಹಲವು ವಿಧಗಳಿವೆ.

ಯಾವಾಗಲೂ ಸಂಭೋಗದಲ್ಲಿಯೇ ಸುಖವನ್ನು ಪಡೆಯಲೂ ಆಗುವುದಿಲ್ಲ ಹಾಗೂ ನೀಡಲು ಆಗುವುದಿಲ್ಲ. ಅದಕ್ಕಾಗಿ ಮಹಿಳೆಯರನ್ನು ಸಂತೋಷಪಡಿಸಲು ಫೋರಫ್ಲೇ ಗಿಂತ ಮತ್ತೊಂದು ಮಾರ್ಗ ಇಲ್ಲ. ಮಹಿಳೆಯರಲ್ಲಿ ತುಟಿಗಳು, ಸ್ತನಗಳು, ಪೃಷ್ಠಗಳು ಅಥವಾ ಜನನಾಂಗಗಳನ್ನು ಮಾತ್ರ ಸ್ಪರ್ಶಿಸಬೇಕು ಎಂದು ನೀವು ಭಾವಿಸಿದಲ್ಲಿ, ನೀವು ಒಂದು ವಿಚಾರವನ್ನು ಮರೆತಿರುತ್ತೀರಿ. ಮಹಿಳೆಯರ ದೇಹದಲ್ಲಿ ಹಲವಾರು ಭಾಗಗಳು ಸೂಕ್ಷ್ಮವಾಗಿ ಸಂವೇದನೆಯನ್ನು ವ್ಯಕ್ತಪಡಿಸುತ್ತವೆ. ಆ ಭಾಗಗಳನ್ನು ಪ್ರೀತಿಯಿಂದ ಸ್ಪರ್ಶಿಸಿದಾಗ ಹೆಣ್ಣಿಗೆ ಉತ್ತಮ ಆನಂದ ದೊರೆಯುತ್ತದೆ. ಇದರಿಂದ ಲೈಂಗಿಕ ಕ್ರಿಯೆ ಮತ್ತಷ್ಟು ಆನಂದದಾಯಕವಾಗಿರುತ್ತದೆ.  

ನೆತ್ತಿಯ ಸಾವಿರಾರು ಕೂದಲಿನ ಬುಡಗಳಲ್ಲಿ ಒಂದು ಸೂಕ್ಷ್ಮ ಸಂವೇದನೆ ಇರುತ್ತದೆ. ನೀವು ಲೈಂಗಿಕ ಕ್ರಿಯೆ ಮಾಡುವಾಗ ತಲೆಯ ಕೂದಲಿನಲ್ಲಿ ಕೈ ಬೆರಳುಗಳನ್ನು ಆಡಿಸಿ, ಆ ಭಾಗಕ್ಕೆ ಮೃದುವಾದ ಮಸಾಜ್ ಮಾಡಿ. ಇದರಿಂದ ನಿಮ್ಮ ಸಂಗಾತಿಗೆ ಆಗುವ ಆನಂದವನ್ನು ನೀವೇ ನೋಡಿ.

ಮಂಡಿಗಳ ಹಿಂದೆ ಇರುವ ತ್ವಚೆಯು ತುಂಬಾ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತದೆ. ಅದರಲ್ಲೂ ನಿಮ್ಮಾಕೆ ಸ್ಕರ್ಟ್ ಧರಿಸಿದ್ದಲ್ಲಿ, ನಿಮ್ಮ ಬೆರಳುಗಳನ್ನು ಈ ಭಾಗದಲ್ಲಿ ಆಡಿಸಿ. ಆಗ ನೋಡಿ ಆಕೆಯಲ್ಲಿ ಮನ್ಮಥನ ಲೀಲೆ ಹೇಗೆ ಉಕ್ಕುತ್ತದೆ ಎಂದು.

webdunia
ನಿಮ್ಮ ಸಂಗಾತಿ ಒಳ್ಳೆಯ ಮೂಡಿನಲ್ಲಿ ನಿಮ್ಮೊಂದಿಗೆ ಸರಸವಾಡುತ್ತಿದ್ದಲ್ಲಿ, ಆಕೆಗೆ ಮತ್ತಷ್ಟು ಆನಂದವನ್ನು ನೀಡಲು ಆಕೆಯ ಆ ಆನಂದ ನೀಡುವ ಭಾಗವಾದ ಒಳ ತೊಡೆಯನ್ನು ಸ್ಪರ್ಶಿಸಿ.

ನಿಮಗೆ ಎರಡು ಆಯ್ಕೆಗಳಿರುತ್ತವೆ ಒಂದು ನಿಮ್ಮ ಕೈಬೆರಳುಗಳಿಂದ ಆಕೆಯ ಈ ಭಾಗವನ್ನು ಸ್ಪರ್ಶಿಸಿ ಇಲ್ಲವೇ ನಾಲಿಗೆಯಿಂದ ಸ್ಪರ್ಶಿಸಿ. ಎರಡೂ ಬಗೆಯಲ್ಲೂ ಆಕೆಯಲ್ಲಿ ನೀವು ಕಾಮೋತ್ತೇಜನವನ್ನು ತರಬಹುದು.

ಪಾದಗಳಿಗೆ ನೀಡುವ ಮಸಾಜ್‌ನಿಂದ ಆಕೆಯ ಹೃದಯ ನಿಮ್ಮ ಕುರಿತಾಗಿ ಕೃತಜ್ಞತೆ ವ್ಯಕ್ತಪಡಿಸುತ್ತದೆ.
ಯಾವಾಗ ಆಕೆಗೆ ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಬರುತ್ತದೆಯೋ, ಆಗ ನೀವು ಆಕೆಯೊಂದಿಗೆ ಸರಸ ಸಲ್ಲಾಪವೇನು? ಸಂಭೋಗದಲ್ಲಿ ಸಹ ತೊಡಗಬಹುದು. ಅದಕ್ಕಾಗಿ ಈ ಮೇಲೆ ತಿಳಿಸಿರುವ ಸ್ಪರ್ಶ ಕಲೆಯನ್ನು ಕರಗತ ಮಾಡಿಕೊಳ್ಳಿ ಮತ್ತು ಅದನ್ನು ಪ್ರಯೋಗಿಸಿ.




Share this Story:

Follow Webdunia kannada

ಮುಂದಿನ ಸುದ್ದಿ

ದುರ್ಘಟನೆ ಸ್ಥಳಕ್ಕೆ ಧಾರ್ಮಿಕ ಟೀಂ ಭೇಟಿ