Select Your Language

Notifications

webdunia
webdunia
webdunia
Sunday, 13 April 2025
webdunia

ತಹಸೀಲ್ದಾರ್ ಕಚೇರಿಗೆ ಕೊಡ ಒಯ್ದು ಧರಣಿ ನಡೆಸಿದ ನೀರೆಯರು

ನೀರು
ಕಲಬುರ್ಗಿ , ಬುಧವಾರ, 20 ಮಾರ್ಚ್ 2019 (18:55 IST)
ಹತ್ತಾರು ನೀರೆಯರು ನೀರಿಗಾಗಿ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಕುಡಿಯುವ ನೀರಿನ ಹಾಹಾಕಾರಕ್ಕೆ ಖಂಡನೆ ವ್ಯಕ್ತಪಡಿಸಿ, ತಹಶೀಲ್ದಾರ ಕಛೇರಿಗೆ ಮಹಿಳೆಯುರು ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಹಶೀಲ್ದಾರ ಕಛೇರಿಗೆ ಮುತ್ತಿಗೆ ಹಾಕಿದ ಹಳ್ಳಾಲ ಗ್ರಾಮದ ಮಹಿಳೆಯರು ತಹಶೀಲ್ದಾರರಿಗೆ ತರಾಟೆಗೆ ತೆಗೆದುಕೊಂಡರು. ಕೂಡಲೇ ಗ್ರಾಮಕ್ಕೆ ನೀರಿನ ಸೌಲಭ್ಯ ಕಲ್ಪಿಸುವಂತೆ ಆಗ್ರಹ ಮಾಡಿದ್ರು.

ಬೇಡಿಕೆ ಈಡೇರಿಸದಿದ್ದಲ್ಲಿ ಲೋಕಸಭೆ ಚುನಾವಣೆ ಬಹಿಷ್ಕರಿಸೋದಾಗಿ ಎಚ್ಚರಿಕೆ ನೀಡಿದ್ರು. ಶೀಘ್ರ ಸಮಸ್ಯೆ ಬಗೆಹರಿಸುವುದಾಗಿ ತಹಶೀಲ್ದಾರ ಮಧುರಾಜ ಭರವಸೆ ನೀಡಿದ್ರು. ತಹಶೀಲ್ದಾರ ಭರವಸೆ ನಂತರ ಪ್ರತಿಭಟನೆ ವಾಪಸ್ ಪಡೆದ ಮಹಿಳೆಯರು.



Share this Story:

Follow Webdunia kannada

ಮುಂದಿನ ಸುದ್ದಿ

ಸುಂಟರಗಾಳಿಗೆ ಬೆಚ್ಚಿ ಬಿದ್ರು ಆ ಊರಿನ ಜನ್ರು