Select Your Language

Notifications

webdunia
webdunia
webdunia
webdunia

ಗುಪ್ತಾಂಗ ಚಿಕ್ಕದಿದ್ದರೆ ಸಂಭೋಗ ಸುಖ ಸಿಗೋದಿಲ್ವಾ?

ಗುಪ್ತಾಂಗ ಚಿಕ್ಕದಿದ್ದರೆ ಸಂಭೋಗ ಸುಖ ಸಿಗೋದಿಲ್ವಾ?
ಬೆಂಗಳೂರು , ಶುಕ್ರವಾರ, 22 ಮಾರ್ಚ್ 2019 (16:01 IST)
ಸಮಸ್ಯೆ: ನಾನು 26 ವರ್ಷದ ಯುವಕ. ಮನೆಯಲ್ಲಿ ಮದುವೆಗೆ ಹುಡುಗಿ ನೋಡ್ತಾ ಇದ್ದಾರೆ. ಈಗಾಗಲೇ ಅನೇಕ ಹುಡುಗಿಯರನ್ನು ನೋಡಿ ದರೂ ಯಾರನ್ನೂ ಒಪ್ಪಿಕೊಂಡಿಲ್ಲ. ಯಾಕೆಂದರೆ ನಾನೊಂದು ಸಮಸ್ಯೆ ಯಲ್ಲಿ ಬಳಲುತ್ತಿದ್ದೇನೆ. ನನ್ನ ಶಿಶ್ನ ತುಂಬಾ ಚಿಕ್ಕದು. ನಿಗುರಿದಾಗ 4 ಇಂಚಿನಷ್ಟು ಮಾತ್ರ ದೊಡ್ಡದು ಹಾಗೂ ಒಂದೂವರೆ ಇಂಚು ಅಗಲವಾಗುತ್ತದೆ. ಸಾಮಾನ್ಯ ಸ್ಥಿತಿಯಲ್ಲಿ ಬಾಡಿಕೊಂಡಿರುತ್ತದೆ. ಶಿಶ್ನ ಸಣ್ಣದಿದ್ದರೆ ಸಂಭೋಗ ಮಾಡಲು ಸಾಧ್ಯವಿಲ್ಲವೇ? ನನ್ನ ಶಿಶ್ನ ಪೂರ್ತಿ ಉದ್ರೇಕಗೊಂಡಾಗಲೂ ಕೇವಲ 4 ಇಂಚು ಉದ್ದ ಒಂದೂವರೆ ಇಂಚಿಗಿಂತ ಜಾಸ್ತಿ ದೊಡ್ಡದಾಗುವುದಿಲ್ಲ. ಇದರಿಂದ ನಾನು ಮದುವೆಯಾಗುವ ಹೆಣ್ಣಿಗೆ ಸಂಪೂರ್ಣ ಸಂಭೋಗದ ಸುಖ ನೀಡಲು ಸಾಧ್ಯವೇ? ಶಿಶ್ನ ಉದ್ದ ಮಾಡಲು ಔಷಧಗಳಿವೆಯೇ? ಪರಿಹಾರ ನೀಡಿ.

ಸಲಹೆ: ನೀವು ವಿನಾಕಾರಣ ಲೈಂಗಿಕ ಕ್ರಿಯೆ ಬಗ್ಗೆ ಹೆದರಿಕೆ ಇಟ್ಟುಕೊಂಡಿರುವುದನ್ನು ಮೊದಲಿಗೆ ಬಿಟ್ಟುಬಿಡಿ. ಶಿಶ್ನದ ಉದ್ದ ಮತ್ತು ದಪ್ಪ ಸಂಭೋಗ ಕ್ರಿಯೆ ಮಾಡಲು ಅದರಿಂದ ನಿಮಗೆ ಸಿಗುವ ಮತ್ತು ಹೆಣ್ಣಿಗೆ ಕೊಡಬಹುದಾದ ಸಂಪೂರ್ಣ ಆನಂದಕ್ಕೆ ಯಾವರೀತಿಯಲ್ಲೂ ಅಡ್ಡಿ ಬರುವುದಿಲ್ಲ.

ಯಾಕೆಂದರೆ ಗಂಡಿನ ಶಿಶ್ನ ಎಷ್ಟೇ ಉದ್ದವಿದ್ದರೂ ಅವನ ಶಿಶ್ನದ ತುದಿಭಾಗ ಮಾತ್ರ ಅಂದರೆ ಗ್ಲಾನ್ಸ್ ಎಂಬ ಕಿರೀಟದಂತಿರುವ ಭಾಗ ಮಾತ್ರ ಸ್ಪರ್ಶ ಸಂವೇದನಾಶೀಲವಾಗಿರುತ್ತದೆ. ಹೆಣ್ಣಿನ ಯೋನಿ ಎಷ್ಟೇ ಆಳವಾಗಿದ್ದರೂ ಅದರೊಳಗಿನ ಕೇವಲ ಮೊದಲ 1-2 ಇಂಚು ಆಳದಲ್ಲಿ ಮಾತ್ರ ಶಿಶ್ನ ಸ್ಪರ್ಶದ ಅನುಭವ ಹೊಂದುವ ಮತ್ತು ಹಿಂದೆ ಮುಂದೆ ಮಾಡುವಾಗ ಆನಂದದ ಅಲೆಗಳನ್ನು ಉಂಟುಮಾಡುವ ಸಾಮಥ್ರ್ಯ ಹೊಂದಿದ್ದು ಅದನ್ನು ಉಜ್ಜುತ್ತಾ ತಾಗುತ್ತಾ ಘರ್ಷಣೆ ನೀಡುವಷ್ಟು ದಪ್ಪ ಮತ್ತು ಉದ್ದವಾದ ಶಿಶ್ನ ಇದ್ದರೆ ಅಷ್ಟೇ ಸಾಕು
ಬ್ಲೂ ಫಿಲಂಗಳಲ್ಲಿ ನೋಡಿರಬಹುದಾದ ಅತೀ ಉದ್ದನೆಯ ಅತೀ ದಪ್ಪನೆಯ ಶಿಶ್ನಗಳಿಂದ ಸಂಭೋಗಿಸಿದರೆ ಮಾತ್ರ ಹೆಣ್ಣಿಗೆ ಸಂಪೂರ್ಣ ಲೈಂಗಿಕ ಸುಖ ಕೊಡಲು ಸಾಧ್ಯ ಎನ್ನುವುದು ತಪ್ಪು ಕಲ್ಪನೆ. ಅಂತಾ ಚಿತ್ರಗಳನ್ನು ನೋಡಿರುವ ಗಂಡುಗಳಿಗೆ ತಮ್ಮ ಪುರುಷಾಂಗದ ಮೇಲೆ ಸಂದೇಹ ಬರುವುದು ನಿಜ ಹಾಗೂ ಹೆಣ್ಣಿಗೂ ಕೂಡಾ ಸಣ್ಣ ಅಥವಾ ಚಿಕ್ಕದಾಗಿರುವ ತಮ್ಮ ಪತಿಯ ಶಿಶ್ನವನ್ನು ನೋಡಿದಾಗ ಪೋರ್ನ್ ಚಿತ್ರಗಳಲ್ಲಿ ನೋಡಿರುವಂತಹಾ ದಪ್ಪ ಮತ್ತು ಉದ್ದನೆಯ ಶಿಶ್ನಗಳಿಂದ ತಮ್ಮ ಯೋನಿ ಹರಿದುಹೋಗುವಂತೆ ಸಂಭೋಗಿಸಿದರೆ ಮಾತ್ರ ತೃಪ್ತಿ ಸಿಗುತ್ತದೆ ಎಂದು ನಂಬಿರುತ್ತಾರೆ.

ಆದರೆ ಅದು ತಪ್ಪು ಎಂದು ನೀವು ತೋರಿಸಿಕೊಟ್ಟು ಸಂಪೂರ್ಣ ಸಂಭೋಗದ ಸುಖ ನೀಡಿದಾಗ ಅವೆಲ್ಲಾ ಮರೆತು ಖಂಡಿತಾ ಹೊಂದಿ ಕೊಂಡು ನಡೆಯುತ್ತಾರೆ. ಆದ್ದರಿಂದ ಅವಳಿಗೆ ಲೈಂಗಿಕ ಸುಖದ ತೃಪ್ತಿ ನೀಡಲು ನೀವು ಶಕ್ತರೋ ಅಲ್ಲವೋ ಎಂದು ಏನೂ ಭಯಪಡುವ ಅವಶ್ಯಕತೆಯಿಲ್ಲ.

ಶಿಶ್ನ ಉದ್ದ ಮತ್ತು ದಪ್ಪ ಮಾಡುವ ಔಷಧಿ, ಶಶ್ತ್ರ ಚಿಕಿತ್ಸೆ ಅಥವಾ ಯಾವುದಾದರೂ ಸಾಧನ ಸಲಕರಣೆಗಳಿವೆ ಎಂದು ಸುಳ್ಳು ಮಾಹಿತಿ ನೀಡಿ ಹಣ ದೋಚುವ ಎಷ್ಟೋ ವೆಬ್ ಸೈಟುಗಳಿವೆ ಅವುಗಳನ್ನು ನಂಬಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೇರೆ ಹುಡುಗಿ ಸಹವಾಸ ಮಾಡಿ ತಪ್ಪೊಪ್ಪಿಕೊಂಡ ಗಂಡನ ಕ್ಷಮಿಸಬೇಕೇ?