ಬೆಂಗಳೂರು: ಟೊಮೆಟೊ ದರ ನಿನ್ನೆ ಮೊನ್ನೆಯಷ್ಟೇ 10-20 ರೂ.ಗಳಷ್ಟಿತ್ತು. ಆದರೆ ಈಗ ದಿಡೀರ್ ಏರಿಕೆಯಾಗಿದೆ. ಟೊಮೆಟೊ ಈಗ ಬಲು ದುಬಾರಿಯಾಗಿದ್ದು ಎಷ್ಟಾಗಿದೆ ಇಲ್ಲಿದೆ ನೋಡಿ ವಿವರ.
ಮೊನ್ನೆ ಮೊನ್ನೆಯಷ್ಟೇ ಟೊಮೆಟೊ ಖರೀದಿಸುವವರೇ ಇಲ್ಲ ಎಂದು ರೈತರು ಚಿಂತೆಗೀಡಾಗಿದ್ದರು. ಕೆಲವರು ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ ವ್ಯಕ್ತಪಡಿಸುವ ಘಟನೆಗಳೂ ಕಂಡುಬಂದಿದ್ದವು. ಆದರೆ ಈಗ ದಿಡೀರ್ ಬೆಲೆ ಏರಿಕೆಯಾಗಿದೆ.
ಇದರಿಂದ ರೈತರಿಗೆ ಖುಷಿಯಾಗಿದೆ. ಆದರೆ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಟೊಮೆಟೊ ದರ ಈಗ ಮಾರುಕಟ್ಟೆಯಲ್ಲಿ ಶತಕದ ಅಂಚಿಗೆ ತಲುಪಿದೆ. ಕೆಲವು ಕಡೆ 80 ರೂ. ಇನ್ನು ಕೆಲವು ಕಡೆ 90 ರೂ.ಗವರೆಗೆ ಮಾರಾಟವಾಗುತ್ತಿದೆ.
ಬೇಡಿಕೆಗೆ ತಕ್ಕಂತೆ ಟೊಮೆಟೊ ಸರಬರಾಜಾಗುತ್ತಿಲ್ಲ. ಅಲ್ಲದೆ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆ ನಷ್ಟವಾಗುತ್ತಿದೆ. ಸಾಕಷ್ಟು ದಾಸ್ತಾನೂ ಇಲ್ಲದೇ ಇರುವುದು ಟೊಮೆಟೊ ಬೆಲೆ ದಿಡೀರ್ ಏರಿಕೆಯಾಗಲು ಕಾರಣವಾಗಿದೆ.