Select Your Language

Notifications

webdunia
webdunia
webdunia
webdunia

ಇಂದಿನ ಚಿನ್ನ ಬೆಳ್ಳಿ ದರ

ಇಂದಿನ ಚಿನ್ನ ಬೆಳ್ಳಿ ದರ
bangalore , ಭಾನುವಾರ, 6 ಫೆಬ್ರವರಿ 2022 (20:21 IST)
ದೇಶದಲ್ಲಿಂದು ಚಿನ್ನದ ಬೆಲೆ (Gold Price) ಯಥಾಸ್ಥಿತಿ ಇದೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಬೆಲೆಯಲ್ಲಿಯೂ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,100 ರೂ.ಇತ್ತು. ಇಂದು ಸಹ ಅದೇ ಬೆಲೆ ಇದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,200ರೂ. ಇತ್ತು. ಇಂದು ಸಹ ಬೆಲೆಯಲ್ಲಿ ಯಾವುದೇ ಏರಿಳಿತ ಇಲ್ಲ. ಇನ್ನು, ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ದರ ಎಷ್ಟಿದೆ ಎಂಬುದನ್ನು ವಿವರವಾಗಿ ನೋಡೋಣ..
 
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ..?
 
ನೀವು ಚಿನ್ನ ಖರೀದಿಸುವ ಪ್ಲ್ಯಾನ್‌ ಮಾಡುತ್ತಿದ್ದೀರಾ, ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 48,980 ರೂ. ಇತ್ತು. ಇಂದು ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅದೇ ರೀತಿ 22 ಕ್ಯಾರೆಟ್ 45,100 ರೂ. ಆಗಿದೆ. ಇನ್ನು, ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.
 
ಭಾರತದಲ್ಲಿ ಆಭರಣ ಪ್ರಿಯರ ಜನಸಂಖ್ಯೆ ಕಡಿಮೆ ಏನಿಲ್ಲ. ಚಿನ್ನ, ಬೆಳ್ಳಿ ಆಭರಣ ಧರಿಸಲು, ಮಕ್ಕಳ ಮದುವೆಗೆ, ಇತರೆ ಸಮಾರಂಭಗಳಿಗೆ ಎಂದು ಆಭರಣ ಮಾಡಿಸುವವರು, ಚಿಕ್ಕ ಮಕ್ಕಳಿಗೆ - ಹೀಗೆ ಯಾವುದಾದರೂ ಕಾರಣಕ್ಕೆ ಒಡವೆ ಮಾಡಿಸಿಕೊಳ್ಳುತ್ತಿರುತ್ತಾರೆ. ಹಾಗೆ, ಇನ್ನು ಹಲವರು ಆಪತ್ಕಾಲದಲ್ಲಿ ಚಿನ್ನ ಅಡ ಇಡಲು ಅಥವಾ ಮಾರಾಟ ಮಾಡಲು ಬೇಕಾಗುತ್ತದೆಂದು ಸಹ ಅದರ ಮೇಲೆ ಹೂಡಿಕೆ ಮಾಡುತ್ತಾರೆ.
 
ಇತರೆ ನಗರಗಳಲ್ಲಿ ಇಂದಿನ ಚಿನ್ನದ ರೇಟ್ ಎಷ್ಟಿದೆ?
 
ದೇಶದ ಇತರೆ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 49 ಸಾವಿರದ ಆಸುಪಾಸಿನಲ್ಲೇ ಇದೆ. ಈ ಮಧ್ಯೆ, ದೇಶದ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈನಲ್ಲಿ 49,450 ರೂ. ಇದ್ದರೆ, ಮುಂಬೈನಲ್ಲಿ 45,100 ರೂ. ಇದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 49,200 ರೂ. ಹಾಗೂ ಕೋಲ್ಕತ್ತದಲ್ಲಿ 24 ಕ್ಯಾರೆಟ್‌ ಬಂಗಾರದ ಬೆಲೆ 49,200 ರೂ. ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಶಿಕ್‌ನಲ್ಲೂ 24 ಕ್ಯಾರೆಟ್‌ ಚಿನ್ನದ ಬೆಲೆ 49 ಸಾವಿರದ ಆಸುಪಾಸಿನಲ್ಲೇ ಇದೆ.
 
ಇಂದಿನ ಬೆಳ್ಳಿ ದರ:
 
ಬಂಗಾರದ ಬೆಲೆಯಲ್ಲಿ ಏರಿಕೆಯಾಗಿದ್ದರೆ, ಬೆಳ್ಳಿ ದರ (Silver Rate) ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 61,000 ರೂ. ಇತ್ತು. ಇಂದು ಸಹ 61,000 ರೂ. ಇದೆ. ಆದರೆ, ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ 65,100 ರೂ. ಆಗಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೇರಳ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 65,100 ರೂ. ಆಗಿದ್ದರೆ, ಕೊಯಮತ್ತೂರು, ಮಧುರೈನಲ್ಲಿ ಇಂದಿನ ಬೆಳ್ಳಿಯ ದರ 65,100 ರೂ. ಆಗಿದೆ. ಇನ್ನು, ಮೆಟ್ರೋಪಾಲಿಟನ್‌ ನಗರಗಳಾದ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ ಸಹ 65,100 ರೂ. ಆಗಿದೆ.
 
ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ.
 
ಸೂಚನೆ: ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಕೇಸ್ ಕಡಿಮೆ