Select Your Language

Notifications

webdunia
webdunia
webdunia
webdunia

ಕೊರೊನಾ ಕೇಸ್ ಕಡಿಮೆ

ಕೊರೊನಾ ಕೇಸ್ ಕಡಿಮೆ
bangalore , ಭಾನುವಾರ, 6 ಫೆಬ್ರವರಿ 2022 (20:17 IST)
ಕರೊನಾ ಸೋಂಕಿನ ವಿಚಾರದಲ್ಲಿ ಈ ವರ್ಷದ ಮೊದಲ ದಿನದಿಂದಲೇ ಪ್ರಕರಣ ಏರುತ್ತಲೇ ಬಂದಿದ್ದು, ದೈನಂದಿನ ಕರೊನಾ ಸೋಂಕಿನ ಸಂಖ್ಯೆ 50 ಸಾವಿರವನ್ನೂ ದಾಟಿ ಸಾರ್ವಜನಿಕರು ಹಾಗೂ ಸರ್ಕಾರ ಕಂಗೆಡುವಂತೆ ಮಾಡಿತ್ತು.
 
ಆದರೆ ಕಳೆದ ಕೆಲವು ದಿನಗಳಿಂದ ಕರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದ್ದು, ದಿನೇದಿನೆ ಸಮಾಧಾನ ಪಡುವಂತಹ ಸಂಗತಿಗಳೇ ಕಂಡುಬರುತ್ತಿವೆ.
 
ಮಾತ್ರವಲ್ಲ ರಾಜ್ಯ ಇದೀಗ ಇನ್ನಷ್ಟು ಸಮಾಧಾನ ಪಡುವಂಥ ವಾತಾವರಣ ಉಂಟಾಗಿದೆ.
 
ಮೊನ್ನೆ ರಾಜಧಾನಿ ಬೆಂಗಳೂರಿನಲ್ಲಿ ಕರೊನಾ ಪಾಸಿಟಿವಿಟಿ ದರ ಒಂದಂಕಿಗೆ ಇಳಿದಿದ್ದರೆ, ನಿನ್ನೆ ರಾಜ್ಯದಲ್ಲಿನ ಕರೊನಾ ಪಾಸಿಟಿವಿ ದರವೂ ಒಂದಂಕಿಗೆ ಇಳಿದಿದೆ. ಅಂದರೆ ಫೆ.4ರಂದು ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ. 9.17ಕ್ಕೆ ಆಗಿದ್ದು, ಫೆ.5ರಂದು ರಾಜ್ಯದಲ್ಲಿನ ಕರೊನಾ ಪಾಸಿಟಿವಿಟಿ ದರ ಶೇ. 9.04ಕ್ಕೆ ಇಳಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೊರಗುಂಟೆಪಾಳ್ಯ ಪ್ಲೈಓವರ್‌ನಲ್ಲಿ ಬುಧವಾರದೊಳಗೆ ವಾಹನ ಸಂಚಾರ