Select Your Language

Notifications

webdunia
webdunia
webdunia
webdunia

ಶಾಲೆ ಶುಲ್ಕ ಕಟ್ಟದ್ದಕ್ಕೆ ಅನ್ ಲ್ಯೆನ್ ಕ್ಲಾಸ್ ಸ್ಥಗಿತ ! ಪೋಷಕರಿಂದ ಪ್ರತಿಭಟನೆ

ಶಾಲೆ ಶುಲ್ಕ ಕಟ್ಟದ್ದಕ್ಕೆ ಅನ್ ಲ್ಯೆನ್ ಕ್ಲಾಸ್ ಸ್ಥಗಿತ ! ಪೋಷಕರಿಂದ ಪ್ರತಿಭಟನೆ
bangalore , ಭಾನುವಾರ, 6 ಫೆಬ್ರವರಿ 2022 (20:09 IST)
ಪ್ರಸಕ್ತ ಶೈಕ್ಷಣಿಕ ವರ್ಷದ ಪೂರ್ಣ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ತಮ್ಮ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನಿಲ್ಲಿಸಿರುವ  ಈರೋಕಿಡ್ಸ್  ಸ್ಕೂಲ್ ಶಾಲೆಯ ಕ್ರಮ ಖಂಡಿಸಿ ಮಕ್ಕಳ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.ಬೆಂಗಳೂರು ಉತ್ತರ ತಾಲ್ಲೂಕಿನದಾಸರಹಳ್ಳಿ ವಿಧಾನಾಸಭಾ ಕ್ಷೇತ್ರದ ಚಿಕ್ಕಬಾಣವಾರದ ಪುರಸಭೆಯಲ್ಲಿರುವ ಈರೋಕಿಡ್ಸ್ ಶಾಲೆಯ ವಿರುದ್ದ ಪೋಷಕರು ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿದರು.ಈಗಾಗಲೆ ಕೊರೊನಾದಿಂದ ಬಹುತೇಕ ಜನರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ, ಸರಿಯಾಗಿ ಕೆಲಸಗಳಿಲ್ಲದೇ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ಮಧ್ಯೆ ಖಾಸಗಿ ಶಾಲೆಗಳು ಅಮಾನವೀಯವಾಗಿ ವರ್ತಿಸುತ್ತಿವೆ, ಎರಡನೇ ಕಂತಿನ ಶುಲ್ಕ ಕಟ್ಡಿಲ್ಲ ಎಂದು ಆನ್ಲೈನ್ ಕ್ಲಾಸ್ ನಿಂದ ಬ್ಲಾಕ್ ಮಾಡಿದ್ದಾರೆ ಎಂದು ಪೋಷಕರು ತಮ್ಮ ಆಕ್ರೋಶವನ್ನು  ವ್ಯಕ್ತಪಡಿಸಿದ್ದಾರೆ.ಈರೋಕಿಡ್ಸ್  ಶಾಲೆಯ ಆಡಳಿತ ಮಂಡಳಿಯವರು ಮಕ್ಕಳನ್ನು ಆನ್ಲೈನ್ ಕ್ಲಾಸ್‌ ನಿಂದ‌ ಬ್ಲಾಕ್ ಮಾಡಲಾಗಿದ್ದು ಈ ವಿಚಾರವಾಗಿ ಕೇಳಲು ಹೋದ ಪೋಷಕರನ್ನು ಹೊರಹಾಕುವಂತೆ ಭದ್ರತಾ ಸಿಬ್ಬಂಧಿಗೆ ಸೂಚಿಸಲಾಗಿದೆ ಎಂದು ಪೋಷಕರು ತಮ್ಮ ಅಳಲನ್ನು ತೋಡಿಕೊಂಡರು.ಶಾಲಾ ಆವರಣದಲ್ಲಿ ಆಡಳಿತ ಮಂಡಳಿ ವಿರುದ್ಧ ದಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದರು.‌ ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಾಣಾಧಿಕಾರಿ ಶಾಲೆ ಬಳಿ ಬಂದರು ಕೇರ್ ಮಾಡದೇ ಆಧಿಕಾರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪವು ಸಹ ವ್ಯಕ್ತವಾಯಿತು.ಈ ವೇಳೆ ಸೋಲದೇವನಹಳ್ಳಿ ಪೊಲೀಸರ ಮಧ್ಯಪ್ರವೇಶದಿಂದ ಆಡಳಿತ ಮಂಡಳಿಯವರ ಜೊತೆ ಮಾತನಾಡಿ ಸಮದಾನ ಪಡಿಸಿದರು. ಆದರೂ ಪೋಷಕರು ತಮ್ಮ ಪಟ್ಟು ಸಡಿಲಿಸದ ಕಾರಣ ಆಡಳಿತ ಮಂಡಳಿಯವರು ನಮ್ಮಿಂದ  ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಎಂದು ಪತ್ರ ಬರೆದು ಕೊಟ್ಟ ನಂತರ ಪ್ರತಿಭಟನೆ ಕೈ ಬಿಟ್ಟು ಪೋಷಕರು  ಹೊರನಡೆದರು.ಒಟ್ಟಿನಲ್ಲಿ ಖಾಸಗಿ ಶಾಲೆಗಳು ಮಕ್ಕಳ ಭವಿಷ್ಯದ ಜೊತೆ ಚಲ್ಲಾಟ ಮಾಡುವಿದನ್ನು ಬಿಡುತ್ತಾರ ಕಾಯ್ದುನೊಡಬೆಕಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಾರಕ್ಕಿ ಮಾರ್ಕೆಟ್ ತೆರವು