Select Your Language

Notifications

webdunia
webdunia
webdunia
Sunday, 13 April 2025
webdunia

ಮಾಲ್ದಾರೆಯ ಮಾರ್ಗೋಲ್ಲಿ ಕಾಫಿ ತೋಟದಲ್ಲಿ ವ್ಯಾಘ್ರ ಪ್ರತ್ಯಕ್ಷ

ಮಾಲ್ದಾರೆಯ ಮಾರ್ಗೋ
bangalore , ಗುರುವಾರ, 27 ಜನವರಿ 2022 (21:29 IST)
ಮಾಲ್ದಾರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರ್ಗೋಲ್ಲಿ ಕಾಫಿ ತೋಟದಲ್ಲಿ ಬೃಹತಾಕಾರದ  ಹುಲಿಯೊಂದು ಕಾಣಿಸಿಕೊಂಡಿದೆ.
ಕೆಲವು ದಿನಗಳ ಹಿಂದೆ ಇದೇ ಹುಲಿ ಆನೆ ಕಂದಕದ ಬಳಿ ಪ್ರತ್ಯಕ್ಷವಾಗಿತ್ತು. ಇದೀಗ ಹಾಡುಹಗಲೇ ಕಾಫಿ ತೋಟದಲ್ಲಿ ಕಾಣಿಸಿಕೊಳ್ಳುವ ಮೂಲಕ ಗ್ರಾಮಸ್ಥರಲ್ಲಿ ಆತಂಕವನ್ನು ಸೃಷ್ಟಿಸಿದೆ. ಕಾರ್ಮಿಕರು ತೋಟದ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದಾರೆ.ಕಾಫಿ ಮತ್ತು ಕಾಳುಮೆಣಸು ಕೊಯ್ಲು ಆಗದೆ ತೋಟದ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಇಷ್ಟು ದಿನ ಕಾಡಾನೆಗಳ ಹಾವಳಿಯಿಂದ ಬೇಸತ್ತಿದ ಬೆಳೆಗಾರರು ಇದೀಗ ಹುಲಿಯ ಉಪಟಳದಿಂದ ಕಂಗೆಟ್ಟಿದ್ದಾರೆ. ಕಳೆದ ಒಂದು ವಾರದಿಂದ  ಹುಲಿ ಈ ಭಾಗದಲ್ಲಿ ಸಂಚರಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಇದುವರೆಗೆ ಹುಲಿಯನ್ನು ಬಂಧಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರನಿಗೆ ಅಪ್ಪಳಿಸಲಿದೆ SpaceX ರಾಕೆಟ್