Select Your Language

Notifications

webdunia
webdunia
webdunia
webdunia

ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ

Today is National Technology Day
bangalore , ಬುಧವಾರ, 11 ಮೇ 2022 (20:41 IST)
ರಾಷ್ಟ್ರೀಯ ತಂತ್ರಜ್ಞಾನ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು 1998 ರಲ್ಲಿ ಪೋಖ್ರಾನ್ ಪರೀಕ್ಷೆಗಳನ್ನು ಯಶಸ್ವಿಗೊಳಿಸಲು ಕಾರಣವಾದ ವಿಜ್ಞಾನಿಗಳು ಮತ್ತು ಅವರ ಪ್ರಯತ್ನಗಳಿಗೆ ಕೃತಜ್ಞತೆ ಸಲ್ಲಿಸಿದರು. ಪೋಖ್ರಾನ್-II ಪರೀಕ್ಷೆಗಳ ವಾರ್ಷಿಕೋತ್ಸವದ ನೆನಪಿಗಾಗಿ ಪ್ರತಿ ವರ್ಷ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಪೋಖ್ರಾನ್ ಪರೀಕ್ಷೆಗಳ ವೀಡಿಯೊ ಕ್ಲಿಪ್ ಹಂಚಿಕೊಂಡ ಪಿಎಂ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆದರ್ಶಪ್ರಾಯ ನಾಯಕತ್ವ ಹಾಗೂ ಅವರು ಅತ್ಯುತ್ತಮ ರಾಜಕೀಯ ಧೈರ್ಯ ಮತ್ತು ರಾಜನೀತಿಯನ್ನು ತೋರಿಸಿದ್ದಾರೆ ಎಂದು ನನಪಿಸಿಕೊಂಡರು. ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ. 1998ರಲ್ಲಿ ಯಶಸ್ವಿ ಪೋಖ್ರಾನ್ ಪರೀಕ್ಷೆಗಳಿಗೆ ಕಾರಣವಾದ ನಮ್ಮ ಅದ್ಭುತ ವಿಜ್ಞಾನಿಗಳು ಮತ್ತು ಅವರ ಪ್ರಯತ್ನಗಳಿಗೆ ನಾವು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಅತ್ಯುತ್ತಮ ರಾಜಕೀಯ ಧೈರ್ಯ ಮತ್ತು ರಾಜನೀತಿಯನ್ನು ಪ್ರದರ್ಶಿಸಿದ ಅಟಲ್ ಜಿಯವರ ಆದರ್ಶಪ್ರಾಯ ನಾಯಕತ್ವವನ್ನು ನಾವು ಹೆಮ್ಮೆಯಿಂದ ಸ್ಮರಿಸುತ್ತೇವೆ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಅಸಾನಿ’ ಚಂಡಮಾರುತ ಎಫೆಕ್ಟ್​