Publish Date: Fri, 08 Apr 2022 (16:47 IST)
Updated Date: Fri, 08 Apr 2022 (16:48 IST)
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ಗಾಗಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ. ಏಪ್ರಿಲ್ 24ರಂದು ಪ್ರಸಾರವಾಗಲಿರುವ ಮನ್ ಕಿ ಬಾತ್ನಲ್ಲಿ ಮಾತನಾಡಬಹುದಾದ ವಿಷಯಗಳ ಬಗ್ಗೆ ಜನರು ಸಲಹೆಗಳನ್ನು ನೀಡಬಹುದಾಗಿದೆ. ತಿಂಗಳಿಗೆ ಒಮ್ಮೆ ಪ್ರಸಾರವಾಗುವ ಮನ್ ಕಿ ಬಾತ್ ಕಾರ್ಯಕ್ರಮದ 88ನೇ ಸಂಚಿಕೆ ಏಪ್ರಿಲ್ 24ರಂದು ಪ್ರಸಾರವಾಗಲಿದೆ. ಈ ಬಾರಿಯ ಕಾರ್ಯಕ್ರಮಕ್ಕೆ ತಳಮಟ್ಟದಲ್ಲಿ ಬದಲಾವಣೆಗೆ ದುಡಿಯುತ್ತಿರುವವರು ಹಾಗೂ ಅವಿಶ್ರಾಂತ ಶ್ರಮಿಸುತ್ತಿರುವವರ ಬಗ್ಗೆ ಮೋದಿ ಮಾತನಾಡಿದ್ದಾರೆ. ನಿಮಗೂ ಅಂಥ ಸ್ಫೂರ್ತಿದಾಯಕ ಚೇತನಗಳ ವಿವರ ತಿಳಿದಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಮೋದಿ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ಗಾಗಿ ಮಾಹಿತಿ ನೀಡಲು ಇಚ್ಛಿಸುವವರು ನಮೋ ಆ್ಯಪ್ ಅಥವಾ MyGov ವೆಬ್ಸೈಟ್ ಮೂಲಕ ತಮ್ಮ ಅನಿಸಿಕೆ ಹಂಚಿಕೊಳ್ಳಬಹುದು. 1800-11-7800 ಟೋಲ್ಫ್ರೀ ಸಂಖ್ಯೆಗೆ ಕರೆ ಮಾಡಿ ಮೆಸೇಜ್ ರೆಕಾರ್ಡ್ ಮಾಡಬಹುದು.