Select Your Language

Notifications

webdunia
webdunia
webdunia
webdunia

ನೋಟ್‌ಬ್ಯಾನ್ ಬಗ್ಗೆ ತಮಾಷೆ: ಖಾಸಗಿ ವಾಹಿನಿಗೆ ಕೇಂದ್ರದಿಂದ ನೋಟಿಸ್

ನೋಟ್‌ಬ್ಯಾನ್ ಬಗ್ಗೆ ತಮಾಷೆ: ಖಾಸಗಿ ವಾಹಿನಿಗೆ ಕೇಂದ್ರದಿಂದ ನೋಟಿಸ್
bangalore , ಬುಧವಾರ, 19 ಜನವರಿ 2022 (20:59 IST)
ಮಕ್ಕಳ ಶೋ ಒಂದರಲ್ಲಿ ನೋಟ್ ಬ್ಯಾನ್ ಮತ್ತು ಡಿಮಾನ್ಟೈಸೇಷನ್ ಬಗ್ಗೆ ತಮಾಷೆ ಮಾಡಿದ್ದು, ಖಾಸಗಿ ವಾಹಿನಿಗೆ ಕೇಂದ್ರ ನೋಟಿಸ್ ನೀಡಿದೆ.
ಜೂನಿಯರ್ ಸೂಪರ್ ಸ್ಟಾರ್ ಸೀಸನ್-4 ಕಾರ್ಯಕ್ರಮದಲ್ಲಿ ನೋಟ್ ಬ್ಯಾನ್ ಬಗ್ಗೆ ಸ್ಕಿಟ್ ಮಾಡಲಾಗಿದೆ. ಈ ವೇಳೆ ಕಪ್ಪು ಹಣ ನಿರ್ಮೂಲನೆಗೆ ರಾಜ ನೋಟು ಬ್ಯಾನ್ ಮಾಡುತ್ತಾನೆ. ಆದರೂ ಕಪ್ಪು ಹಣ ತೊಲಗೋದಿಲ್ಲ ಎಂದು ತಮಾಷೆಯಾಗಿ ಹೇಳಲಾಗಿದೆ.
ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಮಾಹಿತಿ ಮತ್ತು ಪ್ರಸಾರ ಸಚಿವರಿಗೆ ದೂರು ನೀಡಲಾಗಿದೆ.
ಈ ಸಂಬಂಧ ಖಾಸಗಿ ವಾಹಿನಿಗೆ ನೋಟಿಸ್ ಜಾರಿಯಲ್ಲಿದೆ, ವಾರದೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.
ತಮಿಳಿನ ಈ ಶೋನಲ್ಲಿ ನೋಟ್ಬ್ಯಾನ್ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ಈ ಜೋಕ್‌ಗೆ ಜಡ್ಜ್‌ಗಳು ನಕ್ಕಿದ್ದಾರೆ. ಇದನ್ನು ತಮಿಳುನಾಡು ಬಿಜೆಪಿ ಐಟಿ ಮತ್ತು ಸೋಶಿಯಲ್ ಮೀಡಿಯಾ ಘಟಕ ವಿರೋಧಿಸಿದೆ. ಸಿಟಿಆರ್ ನಿರ್ಮಲ್ ಕುಮಾರ್ ಘಟಕದ ದೂರು.
ಈ ಬಗ್ಗೆ ಕಾರ್ಯಕ್ರಮದ ಜಡ್ಜ್‌ಗಳು ಮಾತನಾಡಿದ್ದು, ಅಲ್ಲಿ ನಡೆದದ್ದೇ ಬೇರೆ, ನಾವು ಆ ಜೋಕ್‌ಗೆ ನಕ್ಕಿಲ್ಲ. ಫೈನಲ್ ಎಡಿಟ್ ನೋಡಿ ನಮಗೂ ಆಶ್ಚರ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಂಕಾಂಗ್‌ನಲ್ಲಿ 2,000 ಇಲಿಗಳಿಗೂ ಕೊರೋನಾ: ಸಾಮೂಹಿಕವಾಗಿ ಕೊಲ್ಲಲು ಸರ್ಕಾರ ನಿರ್ಧಾರ