Select Your Language

Notifications

webdunia
webdunia
webdunia
webdunia

ಕೊರೊನಾ ವೈರಸ್‌ 4ನೇ ಅಲೆ ಎದುರಿಸಲು ಸಜ್ಜಾಗಿ: ಪ್ರಧಾನಿ ಮೋದಿ ಕರೆ

coronavirus covid19 pm modi ಪ್ರಧಾನಿ ನರೇಂದ್ರ ಮೋದಿ ಕೊರೊನಾವೈರಸ್
bengaluru , ಬುಧವಾರ, 27 ಏಪ್ರಿಲ್ 2022 (14:38 IST)
ಕೊರೊನಾ ವೈರಸ್‌ ನಾಲ್ಕನೇ ಅಲೆಯ ಮುನ್ಸೂಚನೆ ದೊರೆತಿದ್ದು, ರಾಜ್ಯಗಳು ಕೂಡಲೇ ಎಚ್ಚೆತ್ತುಕೊಂಡು ಆರಂಭದಲ್ಲೇ ಕಡಿವಾಣ ಹಾಕಲು ಸಜ್ಜಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ಬುಧವಾರ ರಾಜ್ಯ ಸರಕಾರಗಳ ಜೊತೆ ವೀಡಿಯೊ ಕಾನ್ಫರೆನ್ಸ್‌ ಸಭೆ ನಡೆಸಿದ ನಂತರ ಭಾಷಣ ಮಾಡಿದ ಅವರು, ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚಳವಾಗಿದೆ. ಕೋವಿಡ್‌ ನಿಂದ ಪಾರಾಗಲು ಲಸಿಕೆ ಉತ್ತಮ ಸಾಧನವಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಕಾರದಿಂದ ಆರೋಗ್ಯ ಮೂಲ ಸೌಕರ್ಯ ಸಾಕಷ್ಟು ಅಭಿವೃದ್ಧಿಯಾಗಿದೆ. ಈ ಬಾರಿ ಮತ್ತಷ್ಟು ಮೂಲ ಸೌಕರ್ಯ ಒದಗಿಸಲು ಸಿದ್ಧತೆ ನಡೆಸಬೇಕು. ಮತ್ತು ಕೋವಿಡ್‌ ಪರೀಕ್ಷೆ ನಡೆಸಿದ ನಂತರ ಪಾಸಿಟಿವಿಟ್‌ ಬಂದ ವರದಿಗಳನ್ನು ಲ್ಯಾಬೋರೇಟರಿಗೆ ಕಳುಹಿಸಿ ಹೆಚ್ಚಿನ ಪರಿಶೀಲನೆ ಮಾಡಿಸಬೇಕು ಎಂದು ಅವರು ಹೇಳಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ತಾಳೆ ಎಣ್ಣೆ ರಫ್ತು ನಿಷೇಧ ವಿಸ್ತರಿಸಲು ಇಂಡೋನೇಷ್ಯಾ ಚಿಂತನೆ?