ನವದೆಹಲಿ: ನೀರಿಗಾಗಿ ನೆರೆಹೊರೆಯವರ ನಡುವೆ ಕಿತ್ತಾಟವಾಗಿದ್ದು, ಮಹಿಳೆಯೊಬ್ಬರ ಕೊಲೆಯಾಗಿದೆ.
ನೀರಿನ ವಿಚಾರವಾಗಿ ಎರಡು ಮನೆಯವರ ನಡುವೆ ಜಗಳವಾಗಿದೆ. ಇದೇ ಆಕ್ರೋಶದಲ್ಲಿ ನೆರೆಮನೆಯಾತ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಮಹಿಳೆಯ ಸಹಾಯಕ್ಕೆ ಬಂದ ಪತಿಗೂ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.