Select Your Language

Notifications

webdunia
webdunia
webdunia
Wednesday, 9 April 2025
webdunia

ಸಂಸ್ಕೃತಿ ಉಳಿಸಲು ನಮ್ಮ ಕ್ಷೇತ್ರದಲ್ಲಿ ಮಹನೀಯರುಗಳು ಹೆಸರು ನಾಮಕರಣ

To save the culture
bangalore , ಗುರುವಾರ, 19 ಜನವರಿ 2023 (13:56 IST)
ಶ್ರೀಮತಿ ವಿಶಾಲಕ್ಷ್ಮೀ ಚಿದಾನಂದಮೂರ್ತಿ, ಹಿರಿಯ ಸಾಹಿತಿ ವೀರಣ್ಣ, ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಸೋಮಣ್ಣರವರು, ಕನ್ನಡಪರ ಹೋರಾಟಗಾರ ಪಾಲನೇತ್ರ ಲೋಕಾರ್ಪಣೆ ಮಾಡಿದರು.
 
ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಂದು ಕಾಮಗಾರಿ ಯೋಜನೆಗಳಿಗೆ ರಾಷ್ಟ್ರ ಮತ್ತು ರಾಜ್ಯಕ್ಕೆ ಸೇವೆ ಸಲ್ಲಿಸಿದ ಮಹನೀಯರುಗಳು ಹೆಸರುಗಳನ್ನು ನಾಮಕರಣ ಮಾಡಲಾಗಿದೆ.ಶ್ರೀ ಬಸವೇಶ್ವರ, ದಾಸಶೇಷ್ಠ ಕನಕದಾಸ, ಸಂಗೊಳ್ಳಿ ರಾಯಣ್ಣ, ನಾಡಪ್ರಭು ಕೆಂಪೇಗೌಡರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಪೇಜಾವರ ಶ್ರೀ ,ನಾಡೋಜ ಚಿದಾನಂದಮೂರ್ತಿ ಮಹನೀಯರುಗಳು ಹೆಸರುಗಳು ಶಾಶ್ವತವಾಗಿ ಸ್ಮರಣೆ ಮಾಡಿಕೊಳ್ಳಲು ಮತ್ತು ಮುಂದಿನ ಪೀಳಿಗೆಗೆ ಮಹನೀಯರುಗಳ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಂಡು ಉತ್ತಮ ಪ್ರಜೆಯಾಗಲಿ  ಎಂಬ ಉದ್ದೇಶದಿಂದ ಹೆಸರುಗಳನ್ನು ನಾಮಕರಣ ಮಾಡಲಾಗಿದೆ.
 
ರಾಷ್ಟ್ರಕ್ಕೆ ಉಪಯುಕ್ತ ಸಂಶೋಧನೆ ಮಾಡಿರುವ ಚಿದಾನಂದಮೂರ್ತಿರವರು ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು ಎಂದು ಸಭಾಂಗಣಕ್ಕೆ ಹೆಸರಿಡಲಾಗಿದೆ.
 
ಚಿದಾನಂದಮೂರ್ತಿರವರು ಸಂಶೋಧನೆಯನ್ನು ವಾಸ್ತವಾಂಶಕ್ಕೆ ಹೆಚ್ಚು ಒತ್ತು ನೀಡಿ, ರಾಜ್ಯದ ಮೂಲೆ,ಮೂಲೆಗೆ ತೆರಳಿ ಕನ್ನಡ ನಾಡಿನ ಇತಿಹಾಸವನ್ನು ಸಂಶೋಧನೆ ಮಾಡಿದ್ದಾರೆ.
ಮಾಗಡಿರೋಡ್ ಪೊಲೀಸ್ ಠಾಣೆಯನ್ನು ನವೀಕರಣ ಮಾಡಲಾಗಿದೆ, ಡಿ.ಸಿ.ಪಿ.ಕಛೇರಿಯನ್ನು ಮಾಗಡಿರೋಡ್ ನಲ್ಲಿ ಪ್ರಾರಂಭಿಸಲಾಗಿದೆ.2000ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ ಇರುವ ಪ್ರಥಮ ದರ್ಜೆ ಕಾಲೇಜು ಹಾಗೂ 1ಕಿಲೋ ಮೀಟರ್ ಉದ್ದದ ಮೇಲು ಸೇತುವೆಯನ್ನ ,ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣವನ್ನು   ಜನವರಿ 29ನೇ ಲೋಕಾರ್ಪಣೆ ಮಾಡಲಾಗುವುದು.ನಾಯಂಡಹಳ್ಳಿ ಕೆರೆಯನ್ನು ಶುದ್ದಿಕರಿಸಲಾಗಿದೆ.ದಾಸರಹಳ್ಳಿ ವಾರ್ಡ್ ನಲ್ಲಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಂದಿನ ತಿಂಗಳು 16ನೇ ತಾರೀಖು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಯೋಗಿ ಆದಿತ್ಯನಾಥ್ ರವರ ಅಮೃತಹಸ್ತ ದಿಂದ ಉದ್ಘಾಟನೆ ಮಾಡಲಾಗುವುದು.
 
ನಾಯಂಡಹಳ್ಳಿ 200ಹಾಸಿಗೆಯ ಆಸ್ಪತ್ರೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರ ಹೆಸರು ನಾಮಕರಣ ಮಾಡಲಾಗುವುದು ಎಂದು ಹೇಳಿದರು.ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಹೆಚ್.ಜಯರಾಮ್, ಕೆ.ಉಮೇಶ್ ಶೆಟ್ಟಿ,ಮೋಹನ್ ಕುಮಾರ್, ದಾಸೇಗೌಡ,ಜಯರತ್ನರವರು    ಬಿ.ಜೆ.ಪಿ.ಮುಖಂಡರು,ಕಾರ್ಯಕರ್ತರು ಪಾಲ್ಗೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿಗೆ 12 ಪ್ರಶ್ನೆ ಕೇಳಿದ ಸಿದ್ದರಾಮಯ್ಯ ?