Select Your Language

Notifications

webdunia
webdunia
webdunia
webdunia

ಚುನಾವಣೆ : ಹಳೇ ಮೈಸೂರಿನಲ್ಲಿ ಅಮಿತ್ ಶಾ ಸೂತ್ರ

ಚುನಾವಣೆ : ಹಳೇ ಮೈಸೂರಿನಲ್ಲಿ ಅಮಿತ್ ಶಾ ಸೂತ್ರ
ಬೆಂಗಳೂರು , ಗುರುವಾರ, 19 ಜನವರಿ 2023 (11:03 IST)
ಬೆಂಗಳೂರು : ವಿಧಾನಸಭೆ ಚುನಾವಣೆಗೆ ಬಿಜೆಪಿಯಲ್ಲಿ ಭರ್ಜರಿ ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಬಿಜೆಪಿಗೆ ಈ ಬಾರಿ ಹಳೇ ಮೈಸೂರು ಜಿಲ್ಲೆಗಳು ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳೇ ದೊಡ್ಡ ಸವಾಲು.

ವೀಕ್ ಇರುವ 2 ಭಾಗಗಳಲ್ಲೂ ಟಾರ್ಗೆಟ್ ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಬಿಜೆಪಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದೆ.  ಈ ಪ್ಲ್ಯಾನ್ನ ಭಾಗವಾಗಿಯೇ ಮೈಸೂರು ಕರ್ನಾಟಕಕ್ಕೆ ಚಾಣಕ್ಯ ಅಮಿತ್ ಶಾ ಗೆಲ್ಲುವ ಸೂತ್ರ ಹೆಣೆದಿದ್ದಾರೆ. ಇತ್ತ ಕಲ್ಯಾಣ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಫಾರ್ಮುಲಾ ರೂಪಿಸಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸೀಟ್ ಗೆಲ್ಲಲು ಅಮಿತ್ ಶಾ ಅವರು ಕಳೆದ ತಿಂಗಳು ರಾಜ್ಯದಲ್ಲಿ ಮಿಂಚಿನ ಸಂಚಾರ ನಡೆಸಿದ್ದರು. ಹಳೇ ಮೈಸೂರು ಭಾಗದಲ್ಲಿ ಗೆಲ್ಲುವುದಕ್ಕೆ, ಪಕ್ಷದ ಬಲವರ್ಧನೆಗೆ ಪಕ್ಕಾ ರೂಟ್ಮ್ಯಾಪ್ ಹಾಕಿ, ಒಂದಷ್ಟು ಟಾಸ್ಕ್ಗಳನ್ನು ಅಮಿತ್ ಶಾ ಕೊಟ್ಟು ಹೋಗಿದ್ದರು.

ಇನ್ನು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಗುರುವಾರದಿಂದ ಮೋದಿ ಅಬ್ಬರ ಪ್ರಾರಂಭವಾಗಿದೆ. ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಮೋದಿ ಪ್ರವಾಸ ಕೈಗೊಂಡಿದ್ದು, ಸಂಚಲನ ಸೃಷ್ಟಿಸುವ ನಿರೀಕ್ಷೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಮೋದಿ ಮತ ಭೇಟೆ