ಮೈಸೂರು : ಕುಡಿದ ಮತ್ತಿನಲ್ಲಿ ಸ್ನೇಹಿತರ  ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರು  ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ.
									
			
			 
 			
 
 			
			                     
							
							
			        							
								
																	ಹುಣಸೂರು ತಾಲೂಕು ತಾಲೂಕಿನ ಹರವೆ ಗ್ರಾಮದ ಸಣ್ಣಸ್ವಾಮಿ ನಾಯಕ (48) ಮೃತ ವ್ಯಕ್ತಿ ಹಾಗೂ ಕುಮಾರ ನಾಯಕ ಕೊಲೆ ಮಾಡಿದ ಆರೋಪಿ. ಕುಮಾರನಿಗೆ ಸಣ್ಣಸ್ವಾಮಿ ನಾಯಕ ನಿನಗೆ 37 ವರ್ಷವಾದರೂ ಮದುವೆಯಾಗಿಲ್ಲ.
									
										
								
																	ನಿನಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಕಿಚಾಯಿಸಿದ್ದ. ಇದರಿಂದಾಗಿ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆಯೂ ಜಗಳ ನಡೆದಿದೆ. ಈ ಜಗಳವೇ ದೊಡ್ಡದಾಗಿ, ಈ ವೇಳೆ ಸಣ್ಣಸ್ವಾಮಿಗೆ ಕುಮಾರ ನಾಯಕ ಚಾಕು ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.