Publish Date: Fri, 13 Jan 2023 (16:11 IST)
Updated Date: Fri, 13 Jan 2023 (16:48 IST)
ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಸುಮಲತಾ ಮೇಲೆ ಬಿಜೆಪಿ ಕಣ್ಣು ಬಿದ್ದಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪೊಲಿಟಿಕಲ್ ಲಾಸ್ಟ್ ಗೇಮ್ ಶುರು ಆಗಿದೆ.
ಆ ಎರಡು ಕ್ಷೇತ್ರಗಳನ್ನ ಸುಮಲತಾಗಾಗಿ ಇಟ್ಟುಕೊಂಡು ಕಾದು ನೋಡುವ ತಂತ್ರದ ಮೊರೆ ಹೋಗ್ತಿದೆ ಬಿಜೆಪಿ. ಆ ಕಾರಣಕ್ಕಾಗಿಯೇ ಸುಮಲತಾ ಚಿತ್ತ ಯಾವ ಕಡೆ? ಜೆಡಿಎಸ್ ಗೇಮ್ ನೋಡಿ ಹೆಜ್ಜೆ ಇಡ್ತಾರಾ ಅನ್ನೋ ಕುತೂಹಲ ಇದೆ.
ಬಿಜೆಪಿ ಪಕ್ಷಕ್ಕೆ ಬನ್ನಿ ಸುಮಲತಾ ಅವರೇ ಅಂತಾ ಬಿಜೆಪಿ ನಾಯಕರಿಂದ ಕೊಡುತ್ತಿರುವ ಆಹ್ವಾನ ನಿಂತಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಅಂಬರೀಶ್ ಶಿಷ್ಯರು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಸುಮಲತಾ ಅವರತ್ತ ಚಿತ್ತ ನೆಟ್ಟಿದೆ.
ಈ ಹಿಂದೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸುಮಲತಾಗೆ ಆಹ್ವಾನ ಕೊಟ್ಟಿದ್ದರು. ಬಿಜೆಪಿ ಸೇರ್ಪಡೆ ಬಗ್ಗೆ ಎರಡ್ಮೂರು ಬಾರಿ ಆಹ್ವಾನ ನೀಡಿದ್ದರೂ ಸುಮಲತಾ ಯಾವುದೇ ನಿರ್ಧಾರ ತಿಳಿಸಿಲ್ಲ.