ನ್ಯೂ ಇಯರ್ ಸೆಲೆಬ್ರೇಷನ್‌ಗೆ ಕ್ಷಣಗಣನೆ ಆರಂಭವಾಗಿದೆ.. ಹೊಸ ವರ್ಷಕ್ಕೆ ಬೆಂಗಳೂರಿನ ಸಂಚಾರಿ ಪೊಲೀಸರು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ. ಪೊಲೀಸರು ಕುಡಿದು ವಾಹನ ಚಲಾಯಿಸುವವರ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದು, ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚು ಕಟ್ಟೆಚ್ಚರ ವಹಿಸಲಾಗುತ್ತೆ.. ಪಬ್, ರೆಸ್ಟೋರೆಂಟ್ ಸುತ್ತಮುತ್ತ ಬ್ಯಾರಿಕೇಡ್ಗಳನ್ನ ಅಳವಡಿಕೆ ಮಾಡಲಾಗಿದೆ.. ಮುಖ್ಯ ರಸ್ತೆಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ವಾಹನ ತಪಾಸಣೆ ಮಾಡಲಾಗುತ್ತೆ.. ಎಂಜಿ ರೋಡ್, ಬ್ರೀಗೇಡ್ ರೋಡ್ ಸುತ್ತಮುತ್ತ ಬಿಗಿ ಬಂದೋಬಸ್ತ್ಗೆ ಸೂಚಿಸಿದ್ದು, ಇಂದಿರಾನಗರ, ಕೋರಮಂಗಲ, ಕಮರ್ಷಿಯಲ್ ಸ್ಟ್ರೀಟ್ ಸುತ್ತಮುತ್ತ ನಿಗಾ ಇಡಲಾಗಿದೆ. ಕೆಲವು ಫ್ಲೈ ಓವರ್ ಗಳ ಮೇಲೆ ಸಂಚಾರಿ ಪೊಲೀಸರನ್ನ ನಿಯೋಜನೆ ಮಾಡಲಾಗುತ್ತೆ.. 500ಕ್ಕೂ ಹೆಚ್ಚು ಸಂಚಾರಿ ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ.. ಎಲ್ಲರೂ ಓಲಾ, ಓಬರ್ ಕ್ಯಾಬ್ ಬಳಸುವಂತೆ ಟ್ರಾಫಿಕ್ ಕಮಿಷನರ್ ಮಹಮ್ಮದ್ ಸಲೀಂ ತಿಳಿಸಿದ್ದಾರೆ.