Select Your Language

Notifications

webdunia
webdunia
webdunia
webdunia

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಬಿಗಿ ಬಂದೋಬಸ್ತ್

Tight security at Chamarajpet Eidgah Maidan
bangalore , ಶನಿವಾರ, 22 ಏಪ್ರಿಲ್ 2023 (18:21 IST)
ಇಂದು ರಂಜಾನ್ ಹಬ್ಬ ಹಿನ್ನೆಲೆ‌ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ಮುಸ್ಲಿಂ ಭಾಂದವರಿಂದ ಇಂದು ಸಾಮೂಹಿಕ‌ ಪ್ರಾರ್ಥನೆ ನಡೆಯುತ್ತಿದ್ದು,ಸಾವಿರಾರು ಸಂಖ್ಯೆಯಲ್ಲಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
 
9:30 ರಿಂದ 10:30 ರವರೆಗೂ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದು,ಪ್ರಾರ್ಥನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಿದ್ದು,ಸುಮಾರು 300ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ಈಗಾಗಲೇ ಪ್ರಾರ್ಥನೆ ಹಿನ್ನಲೆ ಮೈದಾನದಲ್ಲಿ ತಯಾರಿ‌‌ ನಡೆಸಿದ್ದು,ಭರದಿಂದ  ಸಿದ್ದತೆಯ ಕಾರ್ಯ‌‌ ನಡೆಯುತ್ತಿದೆ.ಈಗಾಗಲೇ ಮೈದಾನದಲ್ಲಿ ಸ್ಪೀಕರ್ ಗಳ ಅಳವಡಿಕೆ ಸಾಧ್ಯತೆ ಇದೆ.ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಪ್ರಚಾರಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಟೆಂಪಲ್ ರನ್