Select Your Language

Notifications

webdunia
webdunia
webdunia
webdunia

ಯಮಕನಮರಡಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ

Triangular competition in Yamakanamaradi constituency
ಯಮಕನಮರಡಿ , ಶನಿವಾರ, 22 ಏಪ್ರಿಲ್ 2023 (17:40 IST)
ಯಮಕನಮರಡಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್​ ಅಭ್ಯರ್ಥಿ ಸತೀಶ ಜಾರಕಿಹೊಳಿಗೆ ಸೆಡ್ಡು ಹೊಡೆಯಲು BJP, JDS ವತಿಯಿಂದ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಬಿಜೆಪಿಯಿಂದ ಬಸವರಾಜ ಹುಂದ್ರಿ ಕಣಕ್ಕಿಳಿದ್ರೆ, ಬಿಜೆಪಿ ಪಕ್ಷ ತೊರೆದಿದ್ದ ಮಾರುತಿ ಅಷ್ಟಗಿ JDS ನಿಂದ ಕಣಕ್ಕಿಳಿದಿದ್ದಾರೆ. ತ್ರಿಕೋನ ಸ್ಪರ್ಧೆಯಿಂದ ಯಮಕನಮರಡಿ ಚುನಾವಣೆ ರಂಗೇರಿದೆ. ಕಳೆದ ಬಾರಿ ಕೇವಲ 2800 ಮತಗಳಿಂದ ಗೆಲುವು ಸಾಧಿಸಿದ್ದ ಸತೀಶ ಜಾರಕಿಹೊಳಿ, ಈ ಬಾರಿ ಮತ್ತೆ ಗೆಲುವಿಗೆ ಪಣ ತೊಟ್ಟಿದ್ದಾರೆ. ಮತ್ತೊಂದು ಕಡೆ ಸತೀಶ ಜಾರಕಿಹೊಳಿಗೆ ಪ್ರತಿಸ್ಪರ್ಧಿಯಾಗಿ ಬಸವರಾಜ ಹುಂದ್ರಿ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಬಹಿಷ್ಕರಿಸಿದ ಗೌಡಹಳ್ಳಿ ಗ್ರಾಮಸ್ಥರು