Select Your Language

Notifications

webdunia
webdunia
webdunia
webdunia

ವೃದ್ದೆಯ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿ ಪರಾರಿ

ವೃದ್ದೆಯ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿ ಪರಾರಿ
bangalore , ಮಂಗಳವಾರ, 10 ಜನವರಿ 2023 (19:14 IST)
ವೃದ್ದೆಯ ಕೈಕಾಲು ಕಟ್ಟಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಪ್ರಕರಣದಲ್ಲಿ ತಂದೆ ಮಗನ ಸಹಿತ ಆರು ಜನ ಆರೋಪಿಗಳನ್ನ ಕೆ‌.ಎಸ್.ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗ್ಯಾನ್ ರಂಜನ್ ದಾಸ್, ಶ್ರೀಕಾಂತ್ ದಾಶ್, ಸುಭಾಷ್ ಬಿಸ್ವಾಲ್, ಪದ್ಮನಾಭ್ ಕತುವಾ, ಬಿಷ್ಣು ಚರಣ್ ಬೆಹ್ರಾ ಹಾಗೂ ಸುಧಾಂಶು ಬೆಹ್ರಾ ಬಂಧಿತ ಆರೋಪಿಗಳು.
 
ಜನವರಿ 3ರಂದು ಕೆ.ಎಸ್.ಲೇಔಟ್ ಠಾಣಾ ವ್ಯಾಪ್ತಿಯ ವೈಷ್ಣವಿ ಸುರೇಶ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ವೃತ್ತಿಯಲ್ಲಿ ವೈದ್ಯೆಯಾಗಿರುವ ವೈಷ್ಣವಿ ತಮ್ಮ ಕ್ಲಿನಿಕ್ ಗೆ ತೆರಳಿದ್ದಾಗ ಅವರ ತಾಯಿ‌ ಶ್ರೀಲಕ್ಷ್ಮಿ ಒಬ್ಬರೇ ಮನೆಯಲ್ಲಿದ್ದಾಗ ಮನೆಗೆ ಬಂದಿದ್ದ ಆರೋಪಿಗಳು ಕೊರಿಯರ್ ಬಾಯ್ ಹೆಸರಿನಲ್ಲಿ ಬಾಗಿಲು ತೆರೆಸಿದ್ದರು. ಬಳಿಕ ಮನೆಗೆ ನುಗ್ಗಿ ಶ್ರೀಲಕ್ಷ್ಮಿಯ ಕೈಕಾಲು‌ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಚ್ಚಿ ಮನೆಯಲ್ಲಿದ್ದ 3.50 ಲಕ್ಷ ನಗದು, 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಕೆ.ಎಸ್.ಲೇಔಟ್ ಪೊಲೀಸರು ಓರಿಸ್ಸಾ ಮೂಲದ ಆರು ಜನ ಆರೋಪಿಗಳನ್ನ ಬಂಧಿಸಿದ್ದಾರೆ.
 
 
ಆರೋಪಿಗಳ ಪೈಕಿ ಬಿಷ್ಣು ಚರಣ್ ಬೆಹ್ರಾನ ಅಳಿಯ ಈ ಹಿಂದೆ ವೈಷ್ಣವಿ ಸುರೇಶ್ ಮನೆಯಲ್ಲಿ‌ ಕಾರು ಚಾಲಕ ಹಾಗೂ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ಅದೇ ಸಂದರ್ಭದಲ್ಲಿ ಕೆಲ ದಿನಗಳ ಕಾಲ ಬಿಷ್ಣು ಚರಣ್ ಅಳಿಯ ಮತ್ತು ಮಗಳ ಮನೆಯಲ್ಲಿ ವಾಸವಾಗಿದ್ದ. ಇತ್ತೀಚಿಗೆ ಕೆಲ ದಿನಗಳ ಹಿಂದಷ್ಟೇ ಬಿಷ್ಣು ಚರಣ್ ಅಳಿಯನನ್ನ ಬೇರೆಡೆಗೆ ಕೆಲಸಕ್ಕೆ ನೇಮಿಸಲಾಗಿತ್ತು. ಅದೇ ಸಂದರ್ಭವನ್ನ ಬಳಸಿಕೊಳ್ಳಲು ನಿರ್ಧರಿಸಿದ್ದ ಬಿಷ್ಣು ಚರಣ್ ಓರಿಸ್ಸಾದಿಂದ ತನ್ನ ಮಗ ಸುಧಾಂಶು ಬೆಹ್ರಾ ಹಾಗೂ ಉಳಿದ ನಾಲ್ವರು ಆರೋಪಿಗಳನ್ನ ಕರೆಸಿಕೊಂಡಿದ್ದ. ಜನವರಿ 3ರಂದು ರಾತ್ರಿ 8:30ರ ಸುಮಾರಿಗೆ ಅಪ್ಪ ಮಗ ಇಬ್ಬರೂ ಸೇರಿ ಉಳಿದ ನಾಲ್ವರು ಆರೋಪಿಗಳನ್ನ ಮುಂದೆ ಬಿಟ್ಟು ಕಳ್ಳತನ ಮಾಡಿಸಿ, ಬಳಿಕ‌ ಓರಿಸ್ಸಾಗೆ ಪರಾರಿಯಾಗಿದ್ದರು.
 
ಪ್ರಕರಣದ ತ್ವರಿತ ತನಿಖೆ ಕೈಗೊಂಡ ಕೆ.ಎಸ್.ಲೇಔಟ್ ಠಾಣಾ ಇನ್ಸ್‌ಪೆಕ್ಟರ್ ಕೊಟ್ರೇಶಿ.ಬಿ.ಎಂ, ಸಬ್ ಇನ್ಸ್‌ಪೆಕ್ಟರ್ ನಾಗೇಶ್ ಎಚ್.ಎಂ. ರನ್ನೊಳಗೊಂಡ ತಂಡ ಓರಿಸ್ಸಾದ ಬಾಲಸೋರ್ ಜಿಲ್ಲೆಯಲ್ಲಿದ್ದ ಆರು ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರ ಪೈಕಿ ಬಿಷ್ಣು ಚರಣ್ ಹಾಗೂ ಆತನ ಮಗ ಸುಧಾಂಶು ಬೆಹ್ರಾ ವಿರುದ್ಧ ದೆಹಲಿ ಹಾಗೂ‌ ಮುಂಬೈನಲ್ಲಿಯೂ ಕಳ್ಳತನ ಪ್ರಕರಣಗಳಿವೆ, ಸದ್ಯ ಬಂಧಿತರಿಂದ 3 ಲಕ್ಷಕ್ಕೂ ಅಧಿಕ ನಗದು, 4 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಳಪೆ ಕಾಮಗಾರಿಗೆ ಗೆ ಬಲಿಯಾಯ್ತು ಎರಡು ಅಮಾಯಕ ಜೀವಗಳು