Select Your Language

Notifications

webdunia
webdunia
webdunia
webdunia

ಅಮ್ಮನ ಬೆನ್ನ ಮೇಲೆ ಕಂದನ ಸವಾರಿ

Kandan ride on mom's back
bangalore , ಮಂಗಳವಾರ, 10 ಜನವರಿ 2023 (18:59 IST)
ಅಮ್ಮನೆಂದರೆ ವರ್ಣನೆಗೆ ನಿಲುಕದ ಶಕ್ತಿ. ಆಕೆ ತನ್ನ ಮಕ್ಕಳಿಗಾಗಿ ತನ್ನ ಇಡೀ ಸರ್ವಸ್ವವನ್ನೇ ಧಾರೆ ಎರೆಯುತ್ತಾಳೆ. ಮಕ್ಕಳು ಸಂಕಷ್ಟದಲ್ಲಿದ್ದರೆ ಆಕೆ ಸಹಿಸುವುದಿಲ್ಲ. ಇಲ್ಲೊಂದು ಕ್ಯಾಪಿಬರಾ ಎಂಬ ಪ್ರಾಣಿ ತನ್ನ ಮರಿಯನ್ನು ಸಂಕಷ್ಟದಿಂದ ಪಾರು ಮಾಡಿದೆ. ತಾಯಿ ಕ್ಯಾಪಿಬರಾ ನದಿ ದಾಟಲು ಮುಂದಾಗಿದೆ. ಆದರೆ ತನ್ನ ಮಗುವಿಗೆ ಈಜು ಬರುವುದಿಲ್ಲ. ಆದ್ದರಿಂದ ಒಂದು ದಡದಿಂದ ಮತ್ತೊಂದು ದಡ ತಲುಪುವುದು ಅನಿವಾರ್ಯವಾಗಿತ್ತು. ಆದ್ದರಿಂದ ಮಗುವನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ತೆರಳುತ್ತದೆ. ಈ ವಿಡಿಯೋ ನೋಡಿದರೆ ತಾಯಿಯ ಪ್ರೀತಿ ಅರ್ಥವಾಗುತ್ತದೆ. ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು, ಹಲವು ಮಂದಿ ಮೆಚ್ಚಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಪಾಪದ ಪುರಣ ಅಂತ ನಾಮಕರಣ ಮಾಡಿದ್ದೇವೆ- ಸಿದ್ದರಾಮಯ್ಯ