Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪಕ್ಷದಿಂದ ಪ್ರಜಾ ಧ್ವನಿ ಯಾತ್ರೆ ನಾಳೆಯಿಂದ ಪ್ರಾರಂಭ-ಡಿಕೆಶಿ

ಕಾಂಗ್ರೆಸ್ ಪಕ್ಷದಿಂದ ಪ್ರಜಾ ಧ್ವನಿ ಯಾತ್ರೆ ನಾಳೆಯಿಂದ ಪ್ರಾರಂಭ-ಡಿಕೆಶಿ
bangalore , ಮಂಗಳವಾರ, 10 ಜನವರಿ 2023 (14:31 IST)
ಕಾಂಗ್ರೆಸ್ ಪಕ್ಷದ ವಿಜಯ ಪರ್ವ ಪ್ರಾರಂಭವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದು,ಕಾಂಗ್ರೆಸ್ ಪಕ್ಷದಿಂದ ಪ್ರಜಾ ಧ್ವನಿ ಯಾತ್ರೆ ನಾಳೆಯಿಂದ ಪ್ರಾರಂಭವಾಗಲಿದೆ.ನಮ್ಮ ಪ್ರಜೆಗಳ ಧ್ವನಿ ಪ್ರಜಾ ಧ್ವನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ರು.
 
ಹೊಸ ವರ್ಷ ಬದಲಾವಣೆಯ ಪರ್ವ ಕಾಂಗ್ರೆಸ್ ಪಕ್ಷದ ವಿಜಯ ಪರ್ವ ಪ್ರಾರಂಭ ಆಗಿದೆ.ಈ ಪವಿತ್ರ ಘಳಿಗೆಯಲ್ಲಿ ಪ್ರಜಾಧ್ವನಿಯಾತ್ರೆ ಜನರಿಗೋಸ್ಕರ ಹಮ್ಮಿಕೊಂಡಿದ್ದೇವೆ.ಕಾಂಗ್ರೆಸ್ ಪಕ್ಷ ಜನರ ಭಾವನೆ ತಿಳಿಸುವ ಸಲುವಾಗಿ ಎರಡೂವರೆ ವರ್ಷದಿಂದ ಪ್ರಯತ್ನ ಮಾಡಿದ್ದೇವೆ.ನಮ್ಮ ಪ್ರಜಾಧ್ವನಿ ಪ್ರಜೆಗಳ ಧ್ವನಿ, ಪ್ರಜೆಗಳ ಭಾವನೆ.ನಾವು ನೆಗೆಟಿವ್ ಅಲ್ಲ ಪಾಸಿಟಿವ್ ಯೋಚನೆ ಮಾಡ್ತಿದ್ದೇವೆ.ಕಳೆದ ಎರಡು ವರ್ಷಗಳಿಂದ ಬಿಜೆಪಿ ವೈಫಲ್ಯ ತಿಳಿಸಿದ್ದೇವೆ.ನಾವು ಜನರಿಗೆ ಏನ್ ಮಾಡುತ್ತೇವೆ ಎಂಬುದನ್ನೂ ತಿಳಿಸಿದ್ದೇವೆ.ಈ ಕಾರಣಕ್ಕಾಗಿ ಪ್ರಜಾಧ್ವನಿ ಯಾತ್ರೆಯನ್ನ ಮಾಡ್ತಿದ್ದೇವೆ.ಐತಿಹಾಸಿಕ ಸ್ಥಳ ಬೆಳಗಾವಿಯಿಂದ ಈ ಯಾತ್ರೆ ಆರಂಭ ಮಾಡ್ತಿದ್ದೇವೆ.ಗಾಂಧೀಜಿ ಅವರು ಸ್ವಾತಂತ್ರ್ಯ ತಂದುಕೊಡಲು ಮುಖಂಡತ್ವ ವಹಿಸಿಕೊಂಡ ಪವಿತ್ರ ಜಾಗದಿಂದ ಯಾತ್ರೆ ಆರಂಭ ಮಾಡುತ್ತಿದ್ದೇವೆ.ಈ ಪವಿತ್ರ ಜಾಗದಿಂದ ಬದಲಾವಣೆ ಮುನ್ನುಡಿ ಬರೆಯೋಕೆ ನಿಮ್ಮ ಆಶೀರ್ವಾದ ಬಯಸಿದ್ದೇವೆ.ಕರ್ನಾಟಕ ಅಭಿವೃದ್ಧಿ ಶೀಲ ರಾಜ್ಯ.ಇಡೀ ಭಾರತಕ್ಕೆ ನಮ್ಮ ರಾಜ್್ಯದ ಆಡಳಿತ ವನ್ನ ಗೌರವದಿಂದ ಕಾಣ್ತಿದ್ದರು.ವಿಶ್ಯಾದ್ಯಂತ ಬೆಂಗಳೂರಿಗೆ ಬಂದು ಹೂಡಿಕೆ ಮಾಡಲು ಬಯಸಲಾಗ್ತಿದೆ.ಆದರೆ ಈಗ ಇಡೀ ರಾಜ್ಯಕ್ಕೆ ಕಳಂಕ ಬಂದಿದೆ.ಆ ಕಳಂಕವನ್ಮ ತೊಳೆಯುವ ಕೆಲಸ ಮಾಡಬೇಕಿದೆ
 
ಭ್ರಷ್ಟಾಚಾರ ತಾಂಡವ ಆಗ್ತಿದೆ.ಹೆಣದ ಮೇಲೆ ಹಣ ಎನ್ನುವ ಪರಿಸ್ಥಿತಿ ಇದೆ.ಬಿಜೆಪಿ 104 ಸ್ಥಾನ ಬಂದರು, ಇದು ಜನಾದೇಶ ಆಗಿರಲಿಲ್ಲ.ಆದರೆ ಆಪರೇಷನ್ ಲೋಟಸ್ ಮಾಡಿ ಸರ್ಕಾರ ರಚನೆ ಮಾಡಿದ್ರು.ಕೊಟ್ಟ ಭರವಸೆಗಳನ್ನ ಈಡೇರಿಸುವ ಕೆಲಸ ಮಾಡಿಲ್ಲ.ಪ್ರತಿ ದಿನ ನಾವು ಬಿಜೆಪಿ ನಿಮ್ಮ ಬಳಿ ಇದೆಯಾ ಉತ್ತರ ಅಂತ ಪ್ರಶ್ನೆ ಕೇಳಿದ್ವಿ.ಆದರೆ ಇಲ್ಲೀತನಕ ಉತ್ತರ ಕೊಡೋಕೆ ಆಗಲಿಲ್ಲ.ಕಾಂಟ್ರಾಕ್ಟರ್ ಗಳು ಧ್ವನಿ ಎತ್ತಿದ್ದಾರೆ ಅವರಿಗೆ ಪರಿಹಾರ ಕೊಡುವುದಕ್ಕೆ ಆಗಿಲ್ಲ.ಹಲವಾರು ವರ್ಗದ ಜನ ಭಯದಿಂದ ಬದುಕುವಂತಾಗಿದೆ.ಇಲ್ಲಿ ಹೂಡಿಕೆ ಮಾಡದೇ ಪಕ್ಕದ ರಾಜ್ಯಗಳಿಗೆ ಹೋಗ್ತಿದ್ದಾರೆ.ಇದೆಲ್ಲಾ ರಾಜ್ಯಕ್ಕೆ ದೊಡ್ಡ ಅವಮಾನ.ಕರ್ನಾಟಕ ಯುವಕರಿಗೆ ಪಿಎಸ್ಐ, ಇಂಜಿನಿಯರ್, ಶಿಕ್ಷಕರ ನೇಮಕ ಎಲ್ಲದರಲ್ಲೂ ತಿರುಚುವ ಕೆಲಸ ಆಗಿದೆ.ಐಎಎಸ್, ಐಪಿಎಸ್ ಅಧಿಕಾರಿಗಳು ಜೈಲು ಸೇರುವ ಪರಿಸ್ಥಿತಿ ಸೃಷ್ಡಿ ಆಗಿದೆ ಎಂದು ಈ ವೇಳೆ ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
 
ಈ ವೇಳೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕೈ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಬಿ ಕೆ ಹರಿಪ್ರಸಾದ್,ಪ್ರಿಯಾಂಕ್ ಖರ್ಗೆ,ಜಮೀರ್ ಅಹ್ಮದ್ ,ಸಲೀಂ ಅಹ್ಮದ್,
ಅಖಂಡ ಶ್ರೀನಿವಾಸ್ ಮೂರ್ತಿ ಉಪಸ್ಥಿತಿರಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಶಿಕ್ಷಣಕ್ಕೆ ತಾಲಿಬಾನ್ ಅಸ್ತು