Select Your Language

Notifications

webdunia
webdunia
webdunia
webdunia

ಕಟ್ಟಡ ದುರಂತದಲ್ಲಿ ಬದುಕುಳಿದ 3 ರ ಬಾಲೆ!

ಕಟ್ಟಡ ದುರಂತದಲ್ಲಿ ಬದುಕುಳಿದ 3 ರ ಬಾಲೆ!
ಬೆಂಗಳೂರು , ಸೋಮವಾರ, 16 ಅಕ್ಟೋಬರ್ 2017 (11:27 IST)
ಬೆಂಗಳೂರು: ಈಜಿಪುರದಲ್ಲಿ ಇಂದು ಬೆಳಿಗ್ಗೆ ಬಹುಮಹಡಿ ಕಟ್ಟಡ ಕುಸಿದು ನಾಲ್ವರು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್ ಮೂರು ವರ್ಷದ ಬಾಲಕಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾಳೆ.

 
ಸಿಲಿಂಡರ್ ಸ್ಪೋಟಗೊಂಡು ಕಟ್ಟಡ ಕುಸಿದು ಬಿದ್ದಿತ್ತು. ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಆದರೆ ಅದೃಷ್ಟವಶಾತ್ ಮೂರು ವರ್ಷದ ಬಾಲಕಿ ಸಂಜನಾ ಬದುಕುಳಿದಿದ್ದಾಳೆ.

ಜೀವದ ಹಂಗು ತೊರೆದು ರಕ್ಷಣಾ ಕಾರ್ಯಕ್ಕೆ ಮುನ್ನುಗ್ಗಿದ ಅಗ್ನಿ ಶಾಮಕ ದಳದ ಸಿಬ್ಬಂದಿಯ  ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ. ಘಟನೆಯಲ್ಲಿ ರಕ್ಷಣಾ ಸಿಬ್ಬಂದಿಗೂ ಸಣ್ಣ ಪುಟ್ಟ ಗಾಯಗಳಾಗಿತ್ತು. ಆದರೂ ಎಳೆಯ ಜೀವದ ಪ್ರಾಣ ರಕ್ಷಿಸಿದ್ದು ಸಿಬ್ಬಂದಿಗೆ ಸಮಾಧಾನ ತಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆರುಷಿ ಕೊಲೆ ಪ್ರಕರಣ: ತಲ್ವಾರ್ ದಂಪತಿ ಇಂದು ಮನೆಗೆ