Select Your Language

Notifications

webdunia
webdunia
webdunia
webdunia

ಒಂದೇ ಮನೆಯ ಮೂವರು ಅಕ್ಕತಂಗಿಯರು IAS

ಐಎಎಸ್
ನವದೆಹಲಿ , ಗುರುವಾರ, 22 ಆಗಸ್ಟ್ 2019 (18:41 IST)
ರಾಜಸ್ಥಾನದಿಂದ ಸಿವಿಲ್ ಸರ್ವಿಸಸ್‌ ಗೆ ಒಂದೇ ಕುಟುಂಬದ ಮೂವರು ಅಕ್ಕತಂಗಿಯರು  ಆಯ್ಕೆಯಾಗಿದ್ದಾರೆ.

ಕಮಲ, ಗೀತ, ಮಮತಾರಿಗೆ (ಜಿಲ್ಲಾಧಿಕಾರಿಯಾಗಿ) ರ್ಯಾಂಕ್  32, 64, 128  ಬಂದಿದೆ. ಇದೊಂದು ಅಪರೂಪದ ವಿಷಯ ಎಂದೇ ಹೇಳಬೇಕು. ಇನ್ನು ಇವರ ಕುಟುಂಬದ ಹಿನ್ನೆಲೆ ನೋಡಿದರೆ ತಂದೆ ಇಲ್ಲ.

ತಾಯಿ ದಿನಗೂಲಿ ಮಾಡುತ್ತಾ ವೃತ್ತಿಯಲ್ಲಿ ಅಗಸರಾಗಿರುವ ಇವರದು ತುಂಬಾ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬ. ಇಂತಹ ಸ್ಥಿತಿಯಲ್ಲಿ ಮೂವರು ಹೆಣ್ಣುಮಕ್ಕಳನ್ನು ಓದಿಸಿ ಅವರನ್ನು ಈ ಮಟ್ಟಕ್ಕೆ ಬೆಳೆಸಿದ್ದು ನಿಜಕ್ಕೂ ಮೆಚ್ಚಬೇಕಾದ ಸಂಗತಿ. ಅದೆಷ್ಟೋ ಅವಕಾಶಗಳು, ಆರ್ಥಿಕ ಸಂಪನ್ಮೂಲ, ಕುಟುಂಬದಲ್ಲಿ ತೊಂದರೆ ಇಲ್ಲದೆ, ಎಲ್ಲಾ ಸೌಲಭ್ಯಗಳಿದ್ದು, ರಾಜಕೀಯವಾಗಿ ಪ್ರಬಲವಾಗಿದ್ದರೂ ಆ ಮಟ್ಟಕ್ಕೆ ಬೆಳೆಯುವುದು ನಿಜಕ್ಕೂ ಕಷ್ಟ. ಆದರೆ ಮೂವರು ಕಷ್ಟಪಟ್ಟು ಓದಿ ಈಗ ಭಾವಿ ಭಾರತದ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ. ಅವರ ದೃಢ ಸಂಕಲ್ಪ, ಆತ್ಮವಿಶ್ವಾಸ ನೋಡಿದರೆ ಮೂಕವಿಸ್ಮಿತರಾಗುತ್ತಾರೆ.

ಒಂದೇ ಕುಟುಂಬದಲ್ಲಿ ಒಬ್ಬರಿಗೆ ಸಿವಿಲ್ ಸರ್ವಿಸಸ್ (IASಗೆ ಆಯ್ಕೆ) ಆಗಿರುವುದೆ ದೊಡ್ಡದಾದರೆ, ಇನ್ನು ಇವರು ಮೂವರು ಹೆಣ್ಣುಮಕ್ಕಳಾಗಿರುವುದು, ಅದರಲ್ಲೂ ಆರ್ಥಿಕವಾಗಿ ಹಿಂದುಳಿದ, ಅಗಸ ವೃತ್ತಿಯಲ್ಲಿದ್ದುಕೊಂಡು, ಇವೆಲ್ಲವನ್ನೂ ಮೆಟ್ಟಿ ನಿಂತು ತಮ್ಮ ಗುರಿ ಸಾಧಿಸಿರುವುದು ನಿಜಕ್ಕೂ ಗ್ರೇಟ್. ಇವರ ಹಿಂದಿನ ಶಕ್ತಿ ಆ ಮಾತೃಮೂರ್ತಿ. ಅಂತಹ ಮಟ್ಟಕ್ಕೆ ಅವರನ್ನು ಮುಟ್ಟಿಸಿದ ಆ ಮಾತೃಮೂರ್ತಿಗೆ ಕೋಟಿ ವಂದನೆಗಳು. ಅತ್ಯುನ್ನತ ಸ್ಥಾನಕ್ಕೆ ತಲುಪಿದ ಆ ಮೂವರು ಅಕ್ಕತಂಗಿಯರಿಗೂ ಅಭಿನಂದನೆಗಳು.


Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತನ ಜೊತೆ ದೈಹಿಕ ಸಂಬಂಧ ಹೊಂದಿರೋ ಮಹಿಳೆಗೆ ಹಾಕಿದ್ರು ಚಪ್ಪಲಿ ಹಾರ