Publish Date: Mon, 22 Jul 2019 (16:14 IST)
Updated Date: Mon, 22 Jul 2019 (16:16 IST)
ಬಹುನಿರೀಕ್ಷಿತ ಚಂದ್ರಯಾನ 2 ಉಡಾವಣೆ ಯಶಸ್ವಿಗೊಂಡಿರುವ ಜತೆಗೆ ಇಸ್ರೋ ಸಾಧನೆಗೆ ಮತ್ತೊಂದು ಮಹತ್ವದ ಗರಿ ಸೇರ್ಪಡೆಗೊಂಡಂತೆ ಆಗಿದೆ.
ಚಂದ್ರಯಾನ 2 ಉಪಗ್ರಹವನ್ನ ಹೊತ್ತ ಉಡಾವಣೆ ನೌಕೆ ನಭಕ್ಕೆ ಶ್ರೀಹರಿಕೋಟಾದಿಂದ ಚಿಮ್ಮಿತು.
ಬಹು ನಿರೀಕ್ಷಿತ ಚಂದ್ರಯಾನ 2 ಯೋಜನೆ ಯಶಸ್ವಿಯಾಗಿದ್ದು, ಇಸ್ರೋ ಅಧ್ಯಕ್ಷ ಕೆ. ಶಿವನ್, ತಂಡಕ್ಕೆ ಶುಭಕೋರಿ ಅಭಿನಂದನೆ ಸಲ್ಲಿಸಿದ್ದಾರೆ.
ಭೂ ಕಕ್ಷೆಗೆ ಸೇರಲು ಮಿಷನ್ ಯಶಸ್ವಿಯಾಗಿದೆ. ಈ ಯೋಜನೆಗೆ ಇಸ್ರೋ, ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ಎದುರು ನೋಡುತಿತ್ತು ಎಂದು ಹೇಳಿದ್ದಾರೆ.