Publish Date: Mon, 11 Mar 2019 (15:53 IST)
Updated Date: Mon, 11 Mar 2019 (15:55 IST)
ಅಕ್ರಮವಾಗಿ ಸಂಗ್ರಹಿಸಿದ್ದ ಹಾಗೂ ಸಾಗಾಟ ಮಾಡುತ್ತಿದ್ದ ಅನ್ನಭಾಗ್ಯ ಅಕ್ಕಿ ವಶಕ್ಕೆ ತೆಗೆದುದಕೊಳ್ಳಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಮುಂದುವರಿದ ಆಹಾರ ಇಲಾಖೆಯ ಅಧಿಕಾರಿಗಳ ದಾಳಿ ಅಕ್ರಮ ದಂಧೆ ನಿರತರನ್ನು ಬೆಚ್ಚಿ ಬೀಳಿಸುತ್ತಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಎಪಿಎಂಪಿಯಲ್ಲಿನ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಹಾಗೂ ಸಾಗಾಟ ಮಾಡುತ್ತಿದ್ದ ಅಕ್ಕಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಒಂದು ಲಾರಿ, ಒಂದು ಟಾಟಾ ಏಸರ್, 293 ಕ್ವಿಂಟಾಲ್ ಅಕ್ಕಿ ವಶಕ್ಕೆ ತಗೆದುಕೊಳ್ಳಲಾಗಿದೆ. 7,91,000 ಮೌಲ್ಯದ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಶಿವಾನಂದ ನಾಯಕ ಬಂಧನಕ್ಕೋಳಗಾದ ಟಾಟಾ ಏಸರ್ ಚಾಲಕನಾಗಿದ್ದಾನೆ. ಆಹಾರ ನಿರೀಕ್ಷಕ ಅಂಬರೀಷ ತಾಂಡೂರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಗೋದಾಮಿನ ಮಾಲೀಕ ಗೊಲ್ಲಾಳಪ್ಪ ಹಿರೇಗೌಡರ ಹಾಗೂ ವಾಹನಗಳ ಮಾಲೀಕರು, ಚಾಲಕರ ಮೇಲೆ ದೂರು ದಾಖಲಾಗಿದೆ.