Publish Date: Mon, 25 Feb 2019 (09:21 IST)
Updated Date: Mon, 25 Feb 2019 (09:28 IST)
ದಾವಣಗೆರೆ : ಈ ದೇಶದ ಪ್ರಧಾನಿ ಆಗಲು ಮಲ್ಲಿಕಾರ್ಜುನ ಖರ್ಗೆ ಒಬ್ಬರೇ ಅರ್ಹ ವ್ಯಕ್ತಿ ಎಂದು ಹೇಳುವುದರ ಮೂಲಕ ಕಾಂಗ್ರೆಸ್ ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅಚ್ಚರಿಯನ್ನು ಮೂಡಿಸಿದ್ದಾರೆ.
ದಾವಣಗೆರೆ ಛಲವಾದಿ ಮಹಾಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ರಾಹುಲ್ ಗಾಂಧಿಗೆ ಮೋದಿ ಹೆದರಲ್ಲ. ಪ್ರಧಾನಿ ಮೋದಿಯವರನ್ನು ಎದುರಿಸುವ ತಾಕತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗಿದೆ. ಆದ್ದರಿಂದ ಖರ್ಗೆ ಈ ದೇಶದ ಪ್ರಧಾನಿ ಆಗಬೇಕು ಎಂದು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಮೊದಲ ದಲಿತ ಮುಖಂಡ ದಿ. ಕೆ.ಹೆಚ್. ರಂಗನಾಥ್, ದಿ. ಬಸವಲಿಂಗಪ್ಪ ಮುಖ್ಯಮಂತ್ರಿ ಆಗುವ ಅವಕಾಶ ಇತ್ತು. ಆಗಲಿಲ್ಲ, ಆದರೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಆಗುವುದು ಅಲ್ಲ ದೇಶದ ಪ್ರಧಾನಿಯಾಗುವ ಅರ್ಹತೆ ಇದೆ ಎಂದು ಹೇಳುವುದರ ಮೂಲಕ ರಾಜಕೀಯವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ