Publish Date: Sat, 20 Apr 2019 (16:44 IST)
Updated Date: Sat, 20 Apr 2019 (16:51 IST)
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಹಾಲಿ ಸಂಸದರ ವಿರುದ್ಧ ಸ್ವಾಮೀಜಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಕಳೆದ 15 ವರ್ಷಗಳಿಂದ ಬಿಜೆಪಿ ಸಂಸದರ ಕೊಡುಗೆ ಕ್ಷೇತ್ರಕ್ಕೆ ಶೂನ್ಯ ಅಂತ ಮಠಾಧೀಶರು ಆರೋಪ ಮಾಡಿದ್ದು, ಕೈ ಅಭ್ಯರ್ಥಿ ಪರ ಬೆಂಬಲ ಸೂಚಿಸಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪ್ರಲ್ಹಾದ್ ಜೋಶಿ ಸಾಧನೆ ಶೂನ್ಯವಾಗಿದೆ. ಹೀಗಾಗಿ ಇಲ್ಲಿ ನಾವು ಅನಿವಾರ್ಯವಾಗಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿಗೆ ಬೆಂಬಲ ನೀಡುತ್ತಿದ್ದೇವೆ. ಹೀಗಂತ ಹುಬ್ಬಳ್ಳಿಯ ಪತ್ರಿಕಾ ಭವನದಲ್ಲಿ ಮಾತನಾಡಿದ ವಿವಿಧ ಮಠದ ಮಠಾಧೀಶರು ಹೇಳಿದ್ರು.
ವಿನಯ ಕುಲಕರ್ಣಿಗೆ ಬೆಂಬಲವನ್ನು ಸೂಚಿಸಿದ ಧಾರವಾಡ ಜಿಲ್ಲೆಯ ಮಠಾಧೀಶರು ಮೈತ್ರಿ ಸರಕಾರದ ಅಭ್ಯರ್ಥಿ ಗೆಲ್ಲಬೇಕೆಂದರು.
ವಿನಯ ಕುಲಕರ್ಣಿ ಇನ್ನು ಉತ್ಸಾಹಿ ಯುವಕರ ರೀತಿಯಲ್ಲಿ ಇದ್ದು, ರೈತರ ಪರ ವಿದ್ಯಾರ್ಥಿಗಳ ಪರವಾಗಿ ವಿಶೇಷವಾದ ಒಲುವನ್ನು ಹೊಂದಿದ್ದಾರೆ. ಹೀಗಾಗಿ ಇಂದಿನ ಜನತೆಗೆ ಬೇರೆ ರೀತಿಯಾಗಿ ಕಾರ್ಯ ನಿರ್ವಹಿಸುವ ನೇತಾರರು ಬೇಕಾಗಿದ್ದಾರೆ. ಹೀಗಾಗಿ ನಾವೆಲ್ಲ ಮಠಾಧೀಶರು ಸಮ್ಮಿಶ್ರ ಸರ್ಕಾರದ ಬೆಂಬಲಿತ ಅಭ್ಯರ್ಥಿಯಾದ ವಿನಯ ಕುಲಕರ್ಣಿಗೆ ಬೆಂಬಲವನ್ನು ಕೊಡುತ್ತಿದ್ದೇವೆ ಎಂದು ಹೇಳಿದ್ರು.