Publish Date: Mon, 19 Feb 2024 (18:42 IST)
Updated Date: Mon, 19 Feb 2024 (18:11 IST)
ಬೆಂಗಳೂರು : ಅಗ್ನಿ ದುರಂತದಲ್ಲಿ ಮೂವರು ಸಾವನ್ನಪ್ಪಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಗರದ ಹೊರವಲಯದ ರಾಮೋಹಳ್ಳಿಯ ಬಳಿ ನಡೆದಿದೆ. ಮೆಹಬೂಬ್, ಸಲೀಂ ಮತ್ತೊಬ್ಬ ವ್ಯಕ್ತಿ ಮೃತಪಟಿದ್ದು ಅಲ್ಲಾಭಕ್ಷ್ , ಅಫ್ರೋಜ್, ರಿಯಾಜ್, ಸಾಧಿಕ್ , ಇಮ್ರಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆಯೇ ಕಾರ್ಖಾನೆ ಮಾಲಿಕ ವಿಠಲ್ ಪರಾರಿಯಾಗಿದ್ದು, ಆತನ ವಿರುದ್ದ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಫೋಟಕ್ಕೆ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಆಲ್ಕೋಹಾಲ್ ಮಿಶ್ರಿತ ಕೆಮಿಕಲ್ ಗಳಿಗೆ ಸುಲಭವಾಗಿ ಬೆಂಕಿ ತಗುಲಿದ್ದ ಕಾರಣ ದುರಂತದ ತೀವ್ರತೆ ಹೆಚ್ಚಾಗಿದೆ.
geetha
Publish Date: Mon, 19 Feb 2024 (18:42 IST)
Updated Date: Mon, 19 Feb 2024 (18:11 IST)