Select Your Language

Notifications

webdunia
webdunia
webdunia
Tuesday, 1 April 2025
webdunia

ಮೂರು ಉಚಿತ ಸಿಲಿಂಡರ್ ಬಿಪಿಎಲ್ ಕುಟುಂಬಕ್ಕೆ ಪ್ರತಿದಿನ ಅರ್ದಲೀಟರ್ ನಂದಿನಿ ಹಾಲು.!

Three free cylinders of half liter Nandini milk daily for BPL family
bangalore , ಮಂಗಳವಾರ, 2 ಮೇ 2023 (18:40 IST)
ಕರ್ನಾಟಕ ವಿಧಾನಸಭಾ ಚುನಾವಣೆ  ಇನ್ನೆನ್ನೂ ಕೆಲವೇದಿನಗಳು ಬಾಕಿ ಇರುವ ಬೆನ್ನಲ್ಲೇ, ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದೆ. ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೆ.ಸುದಾಕರ್, ಸಿಎಂ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ, ಹಲವು ರಾಜ್ಯ ನಾಯಕರು  ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ರು,

ರಾಜ್ಯ ಬಿಜೆಪಿ ಸರಕಾರವು ವಿಧಾನಸಭಾ ಚುನಾವಣೆಯ ಮತದಾನ ಇನ್ನೇನು ಬೆರಳೆಣಿಕೆ ದಿನಗಳು ಮಾತ್ರ ಭಾಕಿ ಇದ್ದು.‌ ಬೇರೆ ಬೇರೆ ಪಕ್ಷಗಳು ನಮ್ಮ ಪ್ರಣಾಳಿಕೆಯನ್ನ ಈಗಾಗಲೇ ಗ್ಯಾರಂಟಿಗಳನ್ನ ಬಿಡುಗಡೆ ಮಾಡಿವೆ, ಅದರ ನಡುವೇಯು ಬಿಜೆಪಿ ನನ್ನ ಪ್ರಣಾಳಿಕೆಯನ್ನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯದ 224 ಕ್ಷೇತ್ರದ ಜನತೆ, ತಜ್ಞರ ಅಭಿಪ್ರಾಯ ಪಡೆದ ಪ್ರಣಾಳಿಕೆಯನ್ನ ಸಿದ್ಧಪಡಿಸಲಾಗಿದೆ. ಬಿಜೆಪಿಯದ್ದು ಜನಪರ ಪ್ರಣಾಳಿಕೆಯಾಗಿದೆ, ಜನರಿಗೆ ಏನೆಲ್ಲಾ ಒಳ್ಳೆಯದನ್ನು ಮಾಡಲು ಸಾಧ್ಯವಿದೆ, ಅದನ್ನು ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ವಿಶೇಷ ತಜ್ಞರಿಂದ ಸಲಹೆಗಳನ್ನು ಪಡೆದು ಪ್ರಣಾಳಿಕೆಯನ್ನ ಸಿದ್ದಪಡಿಲಾಗಿದೆ, 900ಕ್ಕೂ ಹೆಚ್ಚಿನ ಸಲಹೆಗಳನ್ನು ನೀಡಿದ್ದಾರೆ. 17 ರಾಷ್ಟ್ರೀಯ ನಾಯಕರು ಪ್ರಣಾಳಿಕೆ ಸಭೆಯಲ್ಲಿ ಭಾಗವಹಿಸಿ ಈ ಪ್ರಣಾಳಿಕೆಯನ್ನ ಸಿದ್ದಪಡಿಸಿದ್ದೇವೆ ಅಂತ ಡಾ. ಕೆ. ಸುಧಾಕರ ತಿಳಿಸಿದ್ರು. 

Share this Story:

Follow Webdunia kannada

ಮುಂದಿನ ಸುದ್ದಿ

ಮೇ 3 ರಂದು ಅಂಕೋಲಾಕ್ಕೆ ಮೋದಿ ಭೇಟಿ