Select Your Language

Notifications

webdunia
webdunia
webdunia
webdunia

ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಭರ್ಜರಿಯಾಗಿ ಚುನಾವಣಾ ಪ್ರಚಾರ

Massive election campaign in Bommanahalli constituency
bangalore , ಮಂಗಳವಾರ, 2 ಮೇ 2023 (16:15 IST)
ಬೊಮ್ಮನಹಳ್ಳಿಯ ಜೆಡಿಎಸ್ ಅಭ್ಯರ್ಥಿ ನಾರಾಯಣ ರಾಜು ಇಂದು ಬೃಹತ್ ಬೈಕ್ ರ್ಯಾಲಿ ನಡೆಸಿದ್ರು. ಇಬ್ಬಲೂರಿನ ದೊಡ್ಡಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ರು. ನಂತರ ಅಗರದ ಆಂಜನೇಯ ಸ್ವಾಮಿ ದೇವಾಲಯದ ಮುಂದೆ ಈಡುಗಾಯೀ ಹೊಡೆದು ಈ ಬಾರಿ ಜನ ಆರ್ಶಿವಾದ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ ಕೆಲಸ ಮಾಡಿದ್ರೆ ಮನೆಯಲ್ಲೇ ಕೂತುಕೊಂಡು ಮತ ಕೇಳಬೇಕಿತ್ತು . ಆದ್ರೆ ಅವರು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು ಮಾತ್ರ ಅಷ್ಟಕಷ್ಟೆ. ಅವರು ಚುನಾವಣೆ ಗೆ ನಿಂತಾಗ ನನ್ನ ಮನೆಯ ಬಾಗಿಲ ಹತ್ತಿರ ಬಂದು ಕಾಯ್ತಿದ್ದರು ನಾನು ಆಗ ಬೇರೆ ಪಕ್ಷದ ಒಂದೇ ಒಂದು ಬಾವುಟ ಕೂಡ ಕಟ್ಟಿಸಲಿಲ್ಲ. ಆದ್ರೆ ಇವತ್ತು ಅವರಿಗೆ ನನ್ನ ಅವಶ್ಯಕತೆ ಯಿಲ್ಲ, ನನಗೂ ಅವರ ಅವಶ್ಯಕತೆ ಯಿಲ್ಲ ಜನ ತೀರ್ಮಾನ ಮಾಡ್ತಾರೆ ಎಂದು ಸತೀಶ್ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಸಾಕಷ್ಟು ಚುನಾವಣೆ ಗಳನ್ನ ಎದುರಿಸಿದ್ದಾರೆ ಅವರ ಬಗ್ಗೆ ನಾನೇನು ಹೆಚ್ಚು ಹೇಳುವುದಿಲ್ಲ, ಬಿಜೆಪಿ ಬಿ ಟೀಂ ಎನ್ನುವದನ್ನು ಸಾಬೀತು ಪಡಿಸಿದ್ರೆ ಈಗ್ಲೇ ಚುನಾವಣೆ ಯಿಂದ ಹಿಂದೆ ಸರಿಯುತ್ತೇನೆಂದು ಚಾಲೆಂಜ್ ಮಾಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಕೆ ಆರ್ ಪುರ ಕ್ಷೇತ್ರದಲ್ಲಿ ಜನರ ಒಲವು ಯಾರ ಮೇಲಿದೆ...?