Select Your Language

Notifications

webdunia
webdunia
webdunia
webdunia

ವಿಷಾನಿಲ ಸೇವಿಸಿ ಮೂವರು ಸಾವು

Three die in poison gas
ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿರುವಂತ ಮೀನಿನ ಫ್ಯಾಕ್ಟರಿಯೊಂದರಲ್ಲಿ ನಿನ್ನೆ ರಾತ್ರಿ ತ್ಯಾಜ್ಯ ಟ್ಯಾಂಕರ್ ಶುಚಿಗೊಳಿಸೋ ಸಂದರ್ಭದಲ್ಲಿ ವಿಷಾನಿಲ ಸೇವಿಸಿ, ಮೂವರು ಸಾವನ್ನಪ್ಪಿ, ಐವರ ಸ್ಥಿತಿ ಗಂಭೀರವಾಗಿರೋ ಘಟನೆ ನಡೆದಿದೆ.ಮೂಲಗಳ ಪ್ರಕಾರ ಎಸ್ ಇ ಝಡ್ ವ್ಯಾಪ್ತಿಯಲ್ಲಿರುವಂತ ಮೀನಿನ ಫ್ಯಾಕ್ಟರಿಯಲ್ಲಿ ರಾತ್ರಿ ವೇಳೆ ಕಾರ್ಮಿಕರು ಮೀನಿನ ತ್ಯಾಜ್ಯದ ಟ್ಯಾಂಕರ್ ಶುಚಿಗೊಳಿಸಲು ಕೆಳಗೆ ಇಳಿದ ಸಂದರ್ಭದಲ್ಲಿ, ಏಕಾಏಕಿ ಅಸ್ವಸ್ಥಗೊಂಡಿದ್ದಾನೆ. ಆತನನ್ನು ರಕ್ಷಿಸಲು ಹೋದಂತ ಮತ್ತೆ 8 ಮಂದಿ ಕೂಡ ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ ಮೂವರು ಸಾವನ್ನಪ್ಪಿ, ಐವರು ಗಂಭೀರ ಸ್ಥಿತಿಯನ್ನು ತಲುಪಿರೋದಾಗಿ ತಿಳಿದು ಬಂದಿದೆ. ಈ ವಿಷಾನಿಲ ದುರಂತದಲ್ಲಿ ಸಾವನ್ನಪ್ಪಿದವರನ್ನು ಪಶ್ಚಿಮ ಬಂಗಾಳದ ಮೂಲಕ ಸಮೀರುಲ್ಲಾ ಇಸ್ಲಾಂ, ಉಮರ್ ಫಾರೂಕ್, ನಿಝಾಮುದ್ದೀನ್ ಸಾಬ್ ಎಂದು ಗುರುತಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯೆಗಾಗಿ ಟವರ್​ ಏರಿದ ಪಾಗಲ್​ ಪ್ರೇಮಿ