Publish Date: Mon, 05 Feb 2024 (16:43 IST)
Updated Date: Mon, 05 Feb 2024 (16:48 IST)
ಬೆಂಗಳೂರು : ಅಪರಿಚಿತ ವ್ಯಕ್ತಿಯೊಬ್ಬನ ಬಳಿ ನಿನ್ನ ಖಾಸಗಿ ಫೋಟೋಗಳಿವೆ. ಹಣ ನೀಡದಿದ್ರೆ ಅವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬೆದರಿಕೆ ಹಾಕುತ್ತಿದ್ದಾನೆ ಎಂದು ನೆಪ ಹೇಳಿ ಗೆಳೆಯನಿಂದ ಹಂತಹಂತವಾಗಿ 65 ಲಕ್ಷ ರೂ. ದೋಚಿದ್ದರು. ಗೆಳೆಯನ ಮುಗ್ದತೆಯನ್ನೇ ಬಂಡವಾಳವಾಗಿಸಿಕೊಂಡು ಸೋದರರಿಬ್ಬರು ನಿನ್ನ ಖಾಸಗಿ ಫೋಟೋ ಇದೆ ಎಂದು ಹೇಳಿ ಬೆದರಿಕೆ ಹಾಕಿ 65 ಲಕ್ಷ ರೂ. ಗಳಿಗೂ ಹೆಚ್ಚು ಹಣ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.
ಆರೋಪಿಗಳಾದ ಅಕ್ಷಯ್ ಕುಮಾರ್ ಮತ್ತು ಭರತ್ ಶಿವಮೊಗ್ಗ ಮೂಲದ ಟೆಕ್ಕಿಯಾಗಿದ್ದ ಸಂತ್ರಸ್ತ ಯುವಕನಿಗೆ ಬಾಲ್ಯ ಸ್ನೇಹಿತರಾಗಿದ್ದರು. ಉತ್ತಮ ಕೆಲಸದಲ್ಲಿದ್ದ ಯುವಕನ ಹಣದ ಮೇಲೆ ಅಣ್ಣತಮ್ಮನ ಕಣ್ಣು ಬಿದ್ದಿತ್ತು. ಹಣ ನೀಡಿ ಬೇಸತ್ತ ಯುವಕ ಕೊನೆಗೆ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಅಣ್ಣತಮ್ಮನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.