Publish Date: Sat, 03 Feb 2024 (11:33 IST)
Updated Date: Sat, 03 Feb 2024 (11:43 IST)
ಬೆಂಗಳೂರು-ಪಿಜಿಗಳಿಗೆ ಪೊಲೀಸರಿಂದ ಗೈಡ್ ಲೈನ್ಸ್ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಪ್ರತಿಕ್ರಿಯಿಸಿದ್ದಾರೆ.ಪಿಜಿ ಸೆಂಟರ್ ಗಳಲ್ಲಿ ರಕ್ಷಣೆ ಕೈಗೊಳ್ಳಲು ಕೆಲವು ಮಾರ್ಗಸೂಚಿ ಮಾಡಲಾಗಿದೆ.ಪಿಜಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಪಿಜಿ ಗೆಸ್ಟ್ ಗಳ ಪೂರ್ವಪರ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ.ಪಿಜಿಗಳಲ್ಲಿ ಹೊರ ರಾಜ್ಯಗಳಲ್ಲದೆ, ಹೊರ ದೇಶದ ಹಲವರು ವಾಸವಿದ್ದಾರೆ.ಟೆಕ್ಕಿಗಳು, ವಿದ್ಯಾರ್ಥಿಗಳು ಸಾಕಷ್ಟು ಮಂದಿ ವಾಸವಿದ್ದಾರೆ.
ಸುರಕ್ಷತೆ ಸಲುವಾಗಿ ಅವರ ವಿವರಗಳನ್ನ ಸಂಗ್ರಹಿಸಲು ಸೂಚನೆ ನೀಡಲಾಗಿದೆ.ಸುರಕ್ಷೆಯ ದೃಷ್ಟಿಯಿಂದ ಕೆಲವು ಮಾರ್ಗಸೂಚಿಗಳನ್ನು ಕೈಗೊಳ್ಳಲಾಗಿದೆ.ಈ ಗೈಡ್ ಲೈನ್ಸ್ ಗಳನ್ನ ಪಾಲನೆ ಮಾಡದಿದ್ರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಕಮಿಷನರ್ ದಯಾನಂದ್ ಹೇಳಿದ್ದಾರೆ.