Select Your Language

Notifications

webdunia
webdunia
webdunia
Sunday, 13 April 2025
webdunia

ಹಣ ಕೊಡಿ ಇಲ್ಲವೇ ಸಾಲ ಕೊಡಿಸಿ ಎಂದು ಸಿಎಂ ಅನ್ನು ಕಾಡಿದ ಅಸಾಮಿ

ಹಣ
ವಿಜಯಪುರ , ಮಂಗಳವಾರ, 25 ಡಿಸೆಂಬರ್ 2018 (13:20 IST)
ವಿಜಯಪುರ: ಸಿಎಂ ಕುಮಾರಸ್ವಾಮಿ ಬಳಿ ನನಗೆ ಹಣ ಕೊಡಿ ಇಲ್ಲವೇ, ಸಾಲ ಕೊಡಿಸಿ ನಾನು ಹಣ ಹಾಳು ಮಾಡುವುದಿಲ್ಲ ಎಂದು ಬೆನ್ನಿಗೆ ಬಿದ್ದ ಬೇತಾಳದಂತೆ ಕಾಡುತ್ತಿದ್ದಾನಂತೆ.

ವಿಜಯಪುರದಲಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿದ ಕುಮಾರಸ್ವಾಮಿಯನ್ನು ಭೇಟಿಯಾಗಲು   ಅಸಾಮಿ ಬಂದಿದ್ದಾನಂತೆ. ಈತ ಹಾವಿನಾಳ ಗ್ರಾಮದ ನಿವಾಸಿ ಕಾಶಿನಾಥ್ ಬನಸೋಡೆ. ಹಣ ಕೊಡಿ ಇಲ್ಲವೇ ಬ್ಯಾಂಕ್ನಿಂದ ಸಾಲ ಕೊಡಿಸಿ ಎಂದು ಸಿಎಂ ಅವರನ್ನು ಬಹಳ ದಿನಗಳಿಂದ ಪೀಡಿಸುತ್ತಿದ್ದಾನೆ.ಈಗಾಗಲೇ ಹಲವು ಬಾರಿ ಸಿಎಂ ಅವರಿಂದಲೇ ಹಣವನ್ನು ಕೂಡ ಪಡೆದಿದ್ದಾನಂತೆ.
 

ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಸಿಎಂ ಹಾಗೂ ಜಿಲ್ಲಾಧಿಕಾರಿ ಕಾಲಿಗೆ ಬಿದ್ದ ಕಾಶಿನಾಥ್, ನಾನೊಬ್ಬ ಅನಾಥ ನನ್ನ ಬಳಿ ಹಣವಿಲ್ಲ, ನನಗೆ 1 ಲಕ್ಷ ರೂ. ಸಾಲ ಕೊಡಿಸಿ ಅದನ್ನು ಹಾಳುಮಾಡಲ್ಲ ಎಂದು ಕೇಳಿಕೊಂಡಿದ್ದಾರೆ. ವೇಳೆ ಸಿಎಂ, ಈತ ಕಳ್ಳ ಆಸಾಮಿ, 50 ಬಾರಿ ನನ್ನ ಬಳಿ ಬಂದಿದ್ದಾನೆ. ಪ್ರತಿ ಸಾರಿ ಹಣ ಕೊಟ್ಟು ಕಳುಹಿಸಿದ್ದೇನೆ. ಅಲ್ಲದೆ ಮತ್ತೆ ಈಗ ಬಂದಿದ್ದಾನೆ ಎಂದು ಹೇಳಿದರು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಖೋಟಾ ನೋಟಿನ ರೂವಾರಿ ಅಬ್ದುಲ್ ಖಾದೀರ್ ಬಂಧನ